Home ಕರಾವಳಿ ಮಂಗಳೂರು: ರಸ್ತೆ ಅಪಘಾತ ತಡೆಗೆ ಸೂಕ್ತ ಕ್ರಮ: ಅಧಿಕಾರಿಗಳೊಂದಿಗೆ ಶಾಸಕ ಭರತ್ ಶೆಟ್ಟಿ ಸಭೆ

ಮಂಗಳೂರು: ರಸ್ತೆ ಅಪಘಾತ ತಡೆಗೆ ಸೂಕ್ತ ಕ್ರಮ: ಅಧಿಕಾರಿಗಳೊಂದಿಗೆ ಶಾಸಕ ಭರತ್ ಶೆಟ್ಟಿ ಸಭೆ

0

ಮಂಗಳೂರು: ತಾಲೂಕಿನಾದ್ಯಂತ ವಿಶೇಷವಾಗಿ ಮಂಗಳೂರು ಹೊರವಲಯದಿಂದ ಮೂಡಬಿದ್ರೆಗೆ ಸಾಗುವ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಸಾವು, ನೋವು ತಪ್ಪಿಸಲು, ಬಸ್ಸಿನ ವೇಗ ನಿಯಂತ್ರಣ, ಸಮಯದ ಪಾಲನೆಯ ವಿಷಯದಲ್ಲಿ ಪೊಲೀಸ್ ಕಮೀಷನರ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳು, ಆರ್ ಟಿಒ ಅಧಿಕಾರಿಗಳು, ಬಸ್ ಅಸೋಸಿಯೇಶನ್ ಪ್ರಮುಖರೊಂದಿಗೆ ಶಾಸಕ ಡಾ. ಭರತ್ ಶೆಟ್ಟಿಯವರು ಸಭೆ ನಡೆಸಿದರು ಸರ್ವಿಸ್ ಬಸ್, ಎಕ್ಸಪ್ರೆಸ್ ಬಸ್ ವೇಗ ನಿಯಂತ್ರಣ, ಸಮಯ ಹೊಂದಾಣಿಕೆ, ಸ್ಟಾಪ್ ವಿಷಯದಲ್ಲಿ ಬಸ್ ಅಸೋಸಿಯೇಶನ್ ಗಳೊಂದಿಗೆ ಸಮಾಲೋಚನೆ ನಡೆಸಿ ಅಪಘಾತಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನಿಸಲಾಗಿದೆ. ಸರ್ವಿಸ್ ಬಸ್ ಹಾಗೂ ಎಕ್ಸಪ್ರೆಸ್ ಬಸ್ಸಿನ ವೇಗವನ್ನು ನಿಯಂತ್ರಿಸಿ ಬಸ್ ಚಲಾಯಿಸಬೇಕು ಮತ್ತು ಬಸ್ಸಿನಲ್ಲಿ ಸರ್ವಿಸ್ ಬಸ್ ಮತ್ತು ಎಕ್ಸಪ್ರೆಸ್ ಬಸ್ ಎಂದು ನಾಮ ಫಲಕ ಹಾಕಬೇಕು. ಎಕ್ಸಪ್ರೆಸ್ ಬಸ್ಸಿನವರಿಗೆ ಕೆಲವು ರಿಕ್ವೆಸ್ಟ್ ಸ್ಟಾಪ್ ಕಡಿಮೆ ಮಾಡಿದ್ದು, ಇದರಿಂದ ಉಳಿತಾಯವಾಗುವ ಸಮಯದಲ್ಲಿ ನಿಯಂತ್ರಣ ವೇಗದಲ್ಲಿ ಮಾತ್ರ ಚಲಾಯಿಸಬೇಕು. ಸಮಯ ಹೊಂದಾಯಿಸಲು ಅನಗತ್ಯ ವೇಗದಲ್ಲಿ ಬಸ್ಸುಗಳು ಸಂಚರಿಸಿ ಅಪಘಾತ ಉಂಟಾಗುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನಿಸಲಾಗಿದೆ.


LEAVE A REPLY

Please enter your comment!
Please enter your name here