SFI urges to call application for college hostel admission
.
ಗಂಗಾವತಿ :ರಾಜ್ಯ ದಲ್ಲಿ ಶಾಲಾ ಕಾಲೇಜು ಆರಂಭವಾಗಿ ಸುಮಾರು ಒಂದು ತಿಂಗಳು ಸಮೀಪಿಸುತ್ತಿದೆ ಅನೇಕ ಬಡ ಹಿಂದುಳಿದ ದಲಿತ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಪ್ರವೇಶಾತಿ ಪಡೆದು ಕಾಲೇಜು ಆರಂಭವಾಗಿ ಪಿಯುಸಿ ತರಗತಿಗಳು ನಡೆಯುತ್ತಿವೆ ಆದರೆ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ.ಸಮಾಜ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಯವರು ಇನ್ನು ಆದರು ಕಾಲೇಜ್ ಹಾಸ್ಟೆಲ್ ಗಳ ಪ್ರವೇಶ ಅರ್ಜಿಯನ್ನು ಕರೆಯದೇ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.ಸುಮಾರು ವಿದ್ಯಾರ್ಥಿಗಳು ಬಸ್ ಗೆ ದಿನಾಲು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಗ್ರಾಮಗಳಿಂದ ಗಂಗಾವತಿ ಕೊಪ್ಪಳ ಅಂತಾ ಸಿಟಿಗೆ ಬರುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ . ನಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿಗಳೇ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ಸಚಿವರಾಗಿದ್ದು.ಕೂಡಲೇ ಸಂಬಂಧಿಸಿದ ಸರಕಾರ ಕಾರ್ಯದರ್ಶಿಗಳಿಗೆ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಕರೆಯಲು ಸೂಚಿಸಬೇಕು.ಮತ್ತು ಎರಡು ಮೂರು ದಿನಗಳಲ್ಲಿ ಅರ್ಜಿ ಕರೆದು ಹಾಸ್ಟೆಲ್ ಪ್ರವೇಶಕ್ಕೆ ಅನುಕೂಲ ಮಾಡಬೇಕು. ಇಲ್ಲವಾದಲ್ಲಿ ಸಚಿವರ ವಿರುದ್ದ ಬಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳೊಂದಿಗೆ ಹೋರಾಟಕ್ಕೆ ಮುನ್ನುಗಬೇಕಾಗುತ್ತದೆ ಎಂದು ರಾಜ್ಯ ಜಂಟಿ ಕಾರ್ಯದರ್ಶಿ ಮತ್ತು ಅಧ್ಯಕ್ಷ ರಾದ ಗ್ಯಾನೇಶ ಕಡಗದ .ಶಿವುಕುಮಾರ.ಸೋಮನಾಥ.ನಾಗರಾಜ.ಶರೀಪ್ ಬಾಲಾಜಿ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.