District in-charge minister Shivraj shop visit to former minister Shri Ranga Devarayulu's residence
ಗಂಗಾವತಿ,೧೩ ಜಿಲ್ಲಾ ಉಸ್ತುವಾರಿ ಸಚಿವ ವರ್ಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಿಗಿ ಮಂಗಳವಾರದಂದು ಮಾಜಿ ಶಾಸಕ ಹಾಗೂ ಮಾಜಿಸಚಿವ. ಶ್ರೀ ರಂಗ ದೇವರಾಯುಲು ನಿವಾಸಕ್ಕೆ ತೆರಳಿ ಸೌಜನ್ಯದ ಮಾತುಕತೆ ನಡೆಸಿ ಅವರಿಂದ ಮಾರ್ಗದರ್ಶನ ಹಾಗೂ ಸಲಹೆ ಆಶೀರ್ವಾದವನ್ನು ಪಡೆದುಕೊಂಡರು,
ಈ ಸಂದರ್ಭದಲ್ಲಿ ಅವರು ಮಾತನಾಡಿ ಸಚಿವರಾದ ಬಳಿಕ ಪ್ರಥಮಬಾರಿಗೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಶ್ರೀರಂಗ ದೇವರಾಯುಲು ಅವರು ಅತ್ಯಂತ ಅನುಭವಿ ರಾಜಕಾರಣಿಯಾಗಿದ್ದು ಅವರಿಂದ ಆಡಳಿತದ ವ್ಯವಸ್ಥೆ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಮಾಹಿತಿಯನ್ನು ಪಡೆದುಕೊಂಡು ಮಾತನಾಡಿ ಮೂಲತಹ ರಾಜವಂಶಸ್ಥರಾದ ಶ್ರೀರಂಗದೇವರಾಯನವರು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಅವರ ಅಧಿಕಾರದ ಅವಧಿಯಲ್ಲಿನ ಕೆಲಸ ಕಾರ್ಯಗಳ ಬಗ್ಗೆ ಮತ್ತು ಜನತೆಯೊಂದಿಗೆ ಅವರ ಒಡನಾಟವನ್ನು ಸ್ಮರಿಸುವುದರ ಮೂಲಕ ಹಿರಿಯಮುತ್ಸದ್ಧಿಗಳ ಅನುಭವ ಸಲಹೆ ಸಹಕಾರ ಇಂದಿನ ರಾಜಕಾರಣಿಗಳಿಗೆ ಅತ್ಯವಶ್ಯವಾಗಿದೆ ಎಂದು ತಿಳಿಸಿದರು ಬಳಿಕ ಶ್ರೀರಂಗದೇವರಾಯಲು ಮಾತನಾಡಿ ಜನ ಪ್ರತಿನಿಧಿಗಳು ಆದವರು ಸರ್ವ ಜನಾಂಗದವರ ಪ್ರೀತಿಗೆ ಪಾತ್ರರಾಗಬೇಕು, ಕ್ಷೇತ್ರದ ಜನತೆಗೆ ವಿಶ್ವಾಸವನ್ನು ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಕ್ಷೇತ್ರ ಸೇರಿದಂತೆ ಜಿಲ್ಲಾ ಉಸ್ತುವಾರಿಯಾಗಿ ಹಾಗೂ ರಾಜ್ಯ ಸಚಿವ ಸಂಪುಟ ಸಚಿವರಾಗಿ ಕಾರ್ಯೋನ್ಮುಖ ರಾಗಬೇಕು, ಜನತೆಗೆ ಅವಶ್ಯವಾದ ಮೂಲಭೂತ ಸೌಲಭ್ಯಗಳು ವಿಶೇಷವಾಗಿ ಶುದ್ಧವಾದ ಕುಡಿಯುವ ನೀರು ರಸ್ತೆ ಚರಂಡಿ ಪರಿಸರ ಸ್ವಚ್ಛತೆ ಹಾಗೂ ರೈತರಿಗೆ ಸೌಲಭ್ಯವನ್ನು ಕಲ್ಪಿಸಲು ವಿಶೇಷ ಗಮನಹರಿಸಬೇಕೆಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಶ್ರೀ ರಂಗದೇವರಾಯುಲು ಧರ್ಮ ಪತ್ನಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯುಲು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು,