Sapling program by Bhagat Singh Scout Unit
ಕೊಪ್ಪಳ ಜೂನ್ 08 (ಕರ್ನಾಟಕ ವಾರ್ತೆ): ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯ ಕೊಪ್ಪಳ, ನಗರ ಸಭೆ, ಭಗತ್ ಸಿಂಗ್ ಸ್ಕೌಟ್ ಘಟಕ ಹಾಗೂ ಜಿಲ್ಲಾ ಸ್ಕೌಟ್ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗವಿಶ್ರೀ ಉದ್ಯಾನವನದಲ್ಲಿ ಜೂನ್ 05ರಂದು ಸಸಿ ನೆಡುವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಬನ್ನಿಕಟ್ಟೆಯವರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವೇಂದ್ರ ಪಂಡಿತ್, ಸಂಸದರಾದ ಸಂಗಣ್ಣ ಕರಡಿ, ನಗರಸಭಾ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿಗಳಾದ ಪ್ರಾಣೇಶ್, ಜಿಲ್ಲಾ ನ್ಯಾಯಾಲಯದ ಮ್ಯಾನೇಜರ್ ಬಸಪ್ಪನವರು, ನಗರಸಭೆಯ ಸದಸ್ಯರಾದ ಮಲ್ಲಪ್ಪ ಕವಲೂರ,
ಸ್ಕೌಟ್ ಸಂಸ್ಥೆಯ ಲೀಡರ್ ಟ್ರೈನರ್ ಜಯರಾಜ್ ಬೂಸದ್ ಸೇರಿದಂತೆ ನಗರಸಭೆಯ ಅಧಿಕಾರಿಗಳು, ಶಿವಶಾಂತವೀರ ಶಾಲೆ, ಶಾಂತಿನಿಕೇತನ ಶಾಲೆ ಹಾಗೂ ಸರಸ್ವತಿ ವಿದ್ಯಾ ಮಂದಿರ ಶಾಲೆಗಳ 250ಕ್ಕೂ ಹೆಚ್ಚು ಸ್ಕೌಟ್ಸ್ ಗೈಡ್ಸ್-ಗಳು ಭಾಗವಹಿಸಿದ್ದರು.