Status on social media by two teachers objecting to guarantee schemes.
ಗಂಗಾವತಿ: ರಾಜ್ಯದ ಕಾಂಗ್ರೆಸ್ ಸರಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯಸರಕಾರ ಅಪಾರ ಪ್ರಮಾಣದ ನಷ್ಟವಾಗುತ್ತಿದ್ದು ದೇಶದಿವಾಳಿಯಾಗಲಿದೆ ಎಂದು ಬಿಜೆಪಿ ಸೇರಿದಂತೆ ಕೆಲ ಸಂಘಪರಿವಾರದವರು ಬಹಿರಂಗವಾಗಿ ಟೀಕಿಸುತ್ತಿದ್ದು ಇವರ ಸಾಲಿಗೆ ಕೆಲ ಸರಕಾರಿ ನೌಕರರು ಹೊರತಾಗಿಲ್ಕ.ಗಂಗಾವತಿಯ ಇಂದಿರಾನಗರದ ಸರಕಾರಿ ಶಾಲೆಯ ಶಿಕ್ಷಕಿ ನಳಿನಾಕ್ಷಿ ಹಾಗೂ ಅಮರಭಗತ್ ಸಿಂಗ್ ನಗರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪತ್ರೆಪ್ಪ ಎಂಬುವರು ಗ್ಯಾರಂಟಿ ಯೋಜನೆಗಳ ಮತ್ತು ಪ್ರಧಾನಿ ಮೋದಿಯವರು ಏನು ಕೆಲಸ ಮಾಡಿದ್ದಾರೆನ್ನುವವರಿಗೆ ಉತ್ತರ ಕೊಡಿ ಎಂದು ೨೦೦ ಕ್ಕೂ ಹೆಚ್ಚು ಕೇಂದ್ರ ಸರಕಾರದ ಯೋಜನೆಗಳ ಕುರಿತು ವಿವರವಾಗಿ ಬರೆದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸರಕಾರಿ ನೌಕರರಿಗೆ ಆಡಳಿತ ಮತ್ತು ವಿಪಕ್ಷಗಳ ಪರವಾಗಿ ಇರದೇ ಸರಕಾರಿ ಕೆಲಸವನ್ನು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಮಾಡಬೇಕೆನ್ನುವ ಸರಕಾರದ ನಿಯಮ ಕೆಎಸ್ ಆರ್ ನಿಯಮಗಳಿದ್ದರೂ ಇಂತಹ ಘಟನೆಯ ಹಿನ್ನೆಲೆಯಲ್ಲಿ ಕನಕಗಿರಿ ಭಾಗದ ಶಿಕ್ಷಕನೊರ್ವ ಸೇರಿ
ಕೊಪ್ಪಳ ಜಿಲ್ಕೆ ಸೇರಿ ತುಮಕೂರು ಜಿಲ್ಲೆಯ ಕೆಲ ಸರಕಾರಿ ನೌಕರರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಮತ್ತು ಪೊಟೊ ಹಂಚಿಕೆ ಮಾಡಿದ್ದರಿಂದ ಸರಕಾರ ಅಮಾನತುಗೊಳಿಸಿ ಇಲಾಖೆಯ ತನಿಖೆ ನಡೆಸಿದ ಉದಾಹರಣೆಗೆ ಇದ್ದರೂ ಗಂಗಾವತಿ ಯಲ್ಲಿ ಇಬ್ಬರು ಶಿಕ್ಷಣ ಇಲಾಖೆಯ ಶಿಕ್ಷಕ ಶಿಕ್ಷಕಿಯರು ಪುನಹ ಬಿಜೆಪಿ ಪರವಾಗಿ ಸ್ಟೇಟಸ್ ಹಾಕಿರುವುದು ಕಂಡು ಬಂದಿದೆ.