Home ಪ್ರಖರ ವಿಶೇಷ ವಿದ್ಯುತ್ ಚಾಲಿತ ವಾಹನ(ಇವಿ) ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಮೊದಲ ಬಾರಿಗೆ ʻ2 ವ್ಹೀಲರ್ ಇವಿ...

ವಿದ್ಯುತ್ ಚಾಲಿತ ವಾಹನ(ಇವಿ) ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಮೊದಲ ಬಾರಿಗೆ ʻ2 ವ್ಹೀಲರ್ ಇವಿ ಮ್ಯಾರಥಾನ್ʼ ಆಯೋಜಿಸಿದ `ಒಟಿಒ’

0
``OTO'' organizes first ever ``2 Wheeler EV Marathon'' to create awareness about electric vehicle (EV) usage.

ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ಸುಸ್ಥಿರ ಚಲನಶೀಲತೆಗಾಗಿ ʻಇ.ವಿʼ ದ್ವಿಚಕ್ರವಾಹನಗಳಿಗೆ ಪರಿವರ್ತನೆಯನ್ನು ʻಒಟಿಒʼ ಪ್ರೋತ್ಸಾಹಿಸುತ್ತದೆ
• ಟಿವಿಎಸ್ ಎಲೆಕ್ಟ್ರಿಕ್, ಆಂಪಿಯರ್, ಒಕಿನಾವಾ, ಮ್ಯಾಟರ್, ಲೆಕ್ಟ್ರಿಕ್ಸ್ ಮತ್ತು ಗ್ರೀನ್ ಮೊಬಿಲಿಟಿ ಸಂಸ್ಥೆಗಳು ʻ2 ವ್ಹೀಲರ್ ಇವಿ ಮ್ಯಾರಥಾನ್ʼನಲ್ಲಿ ಭಾಗವಹಿಸಿದವು


ಬೆಂಗಳೂರು, ಜೂನ್ 4: ಡಿಜಿಟಲ್ ಕಾಮರ್ಸ್ ಮತ್ತು ದ್ವಿಚಕ್ರ ವಾಹನ ಹಣಕಾಸು ವೇದಿಕೆಯಾದ ʻಒಟಿಒʼ, ಎಲೆಕ್ಟ್ರಿಕ್ ವಾಹನ ಅಳವಡಿಕೆಯನ್ನು ಬೆಂಬಲಿಸಲು ʻ2 ವ್ಹೀಲರ್ ಇವಿ ಮ್ಯಾರಥಾನ್ʼ ಹೆಸರಿನ ಚೊಚ್ಚಲ ಎಲೆಕ್ಟ್ರಿಕ್ ವಾಹನ(ಇವಿ) ಕೇಂದ್ರಿತ ಮ್ಯಾರಥಾನ್ ಅನ್ನು ಬೆಂಗಳೂರಿನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಸಿತು. ದೇಶದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ದೊಡ್ಡ ಗುರಿಯ ಬಗ್ಗೆ ಜಾಗೃತಿ ಮೂಡಿಸುವ ಸಂಕಲ್ಪ ತೊಟ್ಟಿತು.

ನಾವು ʻವಿಶ್ವ ಪರಿಸರ ದಿನʼ ಆಚರಿಸುತ್ತಿರುವಾಗ ಸಂದರ್ಭದಲ್ಲಿ, ದ್ವಿಚಕ್ರ ವಾಹನ ಸವಾರರನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವಂತೆ ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ʻಒಟಿಒʼ ವಹಿಸಿಕೊಂಡಿರುವುದು ನಿರ್ಣಾಯಕವಾಗಿದೆ. ಇದು ದೇಶಾದ್ಯಂತ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಕೊಡುಗೆ ನೀಡಲಿದೆ.

ಸಾಂಪ್ರದಾಯಿಕ ದ್ವಿಚಕ್ರ ವಾಹನಗಳು ದಶಕಗಳಿಂದಲೂ ಪರಿಸರ ಮಾಲಿನ್ಯದ ಸಂಕಟಗಳನ್ನು ಹೆಚ್ಚಿಸುತ್ತಿವೆ ಮತ್ತು ಅದರ ಪರಿಣಾಮವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳ ಬಳಕೆಯು ನಿರ್ಣಾಯಕವಾಗಿದೆ. 2023ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಮಾರಾಟವಾದ 15.86 ದಶಲಕ್ಷ ದ್ವಿಚಕ್ರ ವಾಹನಗಳಲ್ಲಿ ಒಟ್ಟು ʻಇವಿʼ ದ್ವಿಚಕ್ರ ವಾಹನಗಳ ಸಂಖ್ಯೆ ಸುಮಾರು 5% ಅಥವಾ 7.3 ಲಕ್ಷ ಆಗಿತ್ತು.

ʻಒಟಿಒʼ ಸಿಇಒ ಮತ್ತು ಸಹ-ಸಂಸ್ಥಾಪಕ ಸುಮಿತ್ ಛಾಜೆದ್ ಅವರು ಮಾತನಾಡಿ, ಇವಿ ದ್ವಿಚಕ್ರ ವಾಹನ ಬಳಕೆ ಹೆಚ್ಚಿಸಲು ಸಾಕಷ್ಟು ಅವಕಾಶವಿದೆ ಎಂದರು. “ನಿಮ್ಮ ಮುಂದಿನ ದ್ವಿಚಕ್ರ ವಾಹನವು ʻಇವಿʼಯೇ ಆಗಿರಲಿ” ಎಂಬುದು ಅವರ ಸ್ಪಷ್ಟ ಸಂದೇಶವಾಗಿತ್ತು.

“ದ್ವಿಚಕ್ರ ವಾಹನ ಹಣಕಾಸು ಮತ್ತು ಡಿಜಿಟಲ್ ವಾಣಿಜ್ಯ ವೇದಿಕೆಯಾಗಿ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವಲ್ಲಿ ಮತ್ತು ಸುಸ್ಥಿರ ಸಾರಿಗೆಯತ್ತ ಪರಿವರ್ತನೆಗೆ ಯೋಜಿಸುತ್ತಿರುವ ಗ್ರಾಹಕರಿಗೆ ಹಣಕಾಸಿನ ನಿರ್ಬಂಧಗಳನ್ನು ಕಡಿಮೆ ಮಾಡುವಲ್ಲಿ ನಮ್ಮ ಜವಾಬ್ದಾರಿಯನ್ನು ನಾವು ಗುರುತಿಸುತ್ತೇವೆ. ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯತ್ತ ಆ ದೊಡ್ಡ ಬದಲಾವಣೆ ಕಡೆಗೆ ʻ2 ವ್ಹೀಲರ್ ಇವಿ ಮ್ಯಾರಥಾನ್ʼ ನಮ್ಮ ಮೊದಲ ಹೆಜ್ಜೆಯಾಗಿದೆ. ಎಲೆಕ್ಟ್ರಿಕ್ ವಾಹನಗಳತ್ತ ಬದಲಾವಣೆಯು ಕೇವಲ ಪರಿಸರದ ಅವಶ್ಯಕತೆಯಲ್ಲ, ಅದೊಂದು ಆರ್ಥಿಕ ಅವಕಾಶವೂ ಹೌದು ಎಂದು ನಾವು ನಂಬುತ್ತೇವೆ. ಈ ಬದಲಾವಣೆಯ ಮುಂಚೂಣಿಯಲ್ಲಿರುವುದು ನಮಗೆ ಹೆಮ್ಮೆ ತಂದಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ದೈನಂದಿನ ವಾಡಿಕೆಯಾಗಿರುವ ಮತ್ತು ಸುಸ್ಥಿರ ಜೀವನವೇ ಜೀವನ ವಿಧಾನವಾಗಿರುವ ಭವಿಷ್ಯವನ್ನು ʻಒಟಿಒʼ ಕಲ್ಪಿಸಿಕೊಳ್ಳುತ್ತದೆ. ಅದನ್ನು ನನಸಾಗಿಸಲು ನಾವು ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ,” ಎಂದು ಸುಮಿತ್ ಛಾಜೆದ್ ಹೇಳಿದರು.
ಟಿವಿಎಸ್ ಎಲೆಕ್ಟ್ರಿಕ್, ಆಂಪಿಯರ್, ಒಕಿನಾವಾ, ಮ್ಯಾಟರ್, ಲೆಕ್ಟ್ರಿಕ್ಸ್ ಮತ್ತು ʻಗ್ರೀನ್ ಮೊಬಿಲಿಟಿʼಯಂತಹ ವಾಹನ ಉದ್ಯಮದಲ್ಲಿ ನಾಯಕರಾಗಿರುವ ʻಒಟಿಒʼ ಪಾಲುದಾರರು ʻ2 ವ್ಹೀಲರ್ ಇವಿ ಮ್ಯಾರಥಾನ್ʼನಲ್ಲಿ ಭಾಗವಹಿಸಿದರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಇವಿ ಅಳವಡಿಕೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಿದರು.

ಇವಿ ಮ್ಯಾರಥಾನ್ನಲ್ಲಿ ಭಾಗವಹಿಸುವವರು ಇ-ಸ್ಕೂಟರ್ಗಳಿಂದ ಎಲೆಕ್ಟ್ರಿಕ್ ಬೈಕ್ಗಳವರೆಗೆ ತಮ್ಮ ವಿದ್ಯುತ್ ಚಾಲಿತ ವಾಹನಗಳನ್ನು ಪ್ರದರ್ಶಿಸಿದರು. ಇದು ʻಇವಿʼ ಮಾರುಕಟ್ಟೆಯಲ್ಲಿನ ವೈವಿಧ್ಯತೆ ಮತ್ತು ನಾವೀನ್ಯತೆಯ ಒಂದು ನೋಟವನ್ನು ಒದಗಿಸಿತು. ʻಇವಿ ಮ್ಯಾರಥಾನ್ʼ ಒಂದು ವಿಭಿನ್ನ ರೀತಿಯ ಕಾರ್ಯಕ್ರಮವಾಗಿತ್ತು. ಇವಿ ಉತ್ಸಾಹಿಗಳು, ಉದ್ಯಮ ತಜ್ಞರು ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಒಂದೆಡೆ ಸೇರಿದ ಜನರ ಉತ್ಸಾಹಭರಿತ ಭಾಗವಹಿಸುವಿಕೆಗೆ ಅದು ಸಾಕ್ಷಿಯಾಯಿತು.

ಮ್ಯಾರಥಾನ್ನಲ್ಲಿ ಭಾಗವಹಿಸಿದವರು ಮತ್ತು ಸಂದರ್ಶಕರು ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನವನ್ನು ಚಾಲನೆ ಮಾಡುವ ರೋಮಾಂಚನವನ್ನು ಅನುಭವಿಸಿದರು. ಜೊತೆಗೆ, ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಗೆ ಪರಿವರ್ತನೆಗೊಳ್ಳಲು ಆಸಕ್ತಿ ತೋರಿಸಿದರು.


LEAVE A REPLY

Please enter your comment!
Please enter your name here