Home ಕರಾವಳಿ ಪುತ್ತೂರು: ಆಟೋ ಚಾಲಕನಿಂದ ಅತ್ಯಾಚಾರ – ಫೋಕ್ಸೋ ಪ್ರಕರಣ ದಾಖಲು

ಪುತ್ತೂರು: ಆಟೋ ಚಾಲಕನಿಂದ ಅತ್ಯಾಚಾರ – ಫೋಕ್ಸೋ ಪ್ರಕರಣ ದಾಖಲು

0

ಪುತ್ತೂರು: ಕಾಲೇಜಿಗೆ ರಜೆ ಇದ್ದ ಸಂದರ್ಭಮನೆಯಲ್ಲಿದ್ದ ವೇಳೆ ಆಟೋ ಚಾಲಕನೊಬ್ಬ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಮಂಜುನಾಥ್ ಕಟ್ಟತ್ತಡ್ಕ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಯುವತಿ ಒಬ್ಬಳೇ ಇದ್ದ ಸಂದರ್ಭನೀರು ಕೇಳುವ ನೆಪದಲ್ಲಿ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ಈ ವಿಚಾರ ಯಾರಿಗೂ ಹೇಳಬಾರದು ಎಂದು ಬೆದರಿಕೆ ಒಡ್ಡಿ ಬಳಿಕದ ದಿನಗಳಲ್ಲಿ ಇದೇ ರೀತಿ 7-8 ಬಾರಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ಬಾಲಕಿ ನೀಡಿದ ದೂರಿನಲ್ಲಿ ಉಲ್ಲೇಕಿಸಲಾಗಿದೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತಂದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಸದ್ಯ ಆರೋಪಿಯ ವಿರುದ್ಧ ದ ಕ ಮಹಿಳಾ ಪೊಲೀಸ್ 0 64(2)(m), 352(3) BNS 2023 2 0 5(1) ಜೊತೆಗೆ 6 ಪೋಕ್ಸ್ ಆಕ್ಟ್ 2012 ರಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here