ಮಂಗಳೂರು: ನಗರದ ಕೊಣಾಜೆಯ ಮಂಗಳೂರು ವಿವಿ ಮಹಿಳಾ ವಸತಿ ನಿಲಯದ ರಸ್ತೆ ಬದಿಯ ಗುಡ್ಡಕ್ಕೆ ಬೆಂಕಿ ಬಿದ್ದ ಪರಿಣಾಮ ದಟ್ಟ ಹೊಗೆ ಆವರಿಸಿ ರಸ್ತೆ ಕಾಣದೆ ಎರಡು ಬಸ್ಸುಗಳ ಮುಖಾಮುಖಿಯಾಗಿ ಢಿಕ್ಕಿಯಾಗಿವೆ.



ಕೊಣಾಜೆಯಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಹಾಗೂ ಇನೊಳೆಗೆ ತೆರಳುವ ಖಾಸಗಿ ಕಾಲೇಜಿನ ಬಸ್ ಮುಖಾಮುಖಿಯಾಗಿ ಢಿಕ್ಕಿಯಾಗಿವೆ.
ಢಿಕ್ಕಿಯ ಪರಿಣಾಮ ಎರಡು ಬಸ್ಸುಗಳ ಚಾಲಕರು ಹಾಗೂ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

