Home ತಾಜಾ ಸುದ್ದಿ ಸಾಲ ಕೊಡದಿದ್ದಕ್ಕೆ ಬ್ಯಾಂಕ್ ದರೋಡೆ- ಬಾವಿಯಲ್ಲಿ ಅಡಗಿಸಿಟ್ಟಿದ್ದ 17 ಕೆಜಿ ಚಿನ್ನ ವಶಕ್ಕೆ

ಸಾಲ ಕೊಡದಿದ್ದಕ್ಕೆ ಬ್ಯಾಂಕ್ ದರೋಡೆ- ಬಾವಿಯಲ್ಲಿ ಅಡಗಿಸಿಟ್ಟಿದ್ದ 17 ಕೆಜಿ ಚಿನ್ನ ವಶಕ್ಕೆ

0

ದಾವಣಗೆರೆ: ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಆರು ತಿಂಗಳ ಆರು ಜನರನ್ನು ಬಂಧಿಸಿದ್ದು, ರೂ. 13 ಕೋಟಿ ಮೌಲ್ಯದ 17 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ಟೋಬರ್ 24 ರಂದು ಆರೋಪಿಗಳು ಬ್ಯಾಂಕ್ ದರೋಡೆ ಮಾಡಿದ್ದರು. ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಆರು ತಿಂಗಳ ಬಳಿಕ ಉಮಾ ಪ್ರಶಾಂತ್ ನೇತೃತ್ವದಲ್ಲಿನ ಪೊಲೀಸರ ತಂಡ ಪ್ರಕರಣವನ್ನು ಬೇಧಿಸಿದೆ. ಇದಕ್ಕಾಗಿ ಆರು ತಂಡವೊಂದನ್ನು ರಚಿಸಲಾಗಿತ್ತು.

ಐದು ತಂಡಗಳು ಗ್ಯಾಂಗ್ ಪತ್ತೆಗಾಗಿ ಉತ್ತರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಕೊನೆಗೆ ಎಲ್ಲಾ ಆರು ಆರೋಪಿಗಳು ಸಿಕ್ಕಿ ಬಿದಿದ್ದಾರೆ.

ದರೋಡೆ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಕುಮಾರ್ ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್‍ನಲ್ಲಿ ಲೋನ್ ಪಡೆಯಲು ಎರಡು ಬಾರಿ ಅರ್ಜಿ ಹಾಕಿದ್ದ, ಈ ಅರ್ಜಿ ತಿರಸ್ಕಾರವಾಗಿತ್ತು. ಇದರಿಂದ ರೋಸಿ ಹೋಗಿದ್ದ. ಇದೇ ಕಾರಣಕ್ಕೆ ಬ್ಯಾಂಕ್ ದರೋಡೆಗೆ ಹಿಂದಿ ವೆಬ್ ಸೀರಿಸ್ ನೋಡಿ ದರೋಡೆಗೆ ಸಂಚು ರೂಪಿಸಿದ್ದ.

ಆರೋಪಿಗಳು ಮೊಬೈಲ್ ವಾಹನ ಬಳಸದೇ, ಯಾವ ಸಾಕ್ಷಿಯನ್ನೂ ಬಿಡದೆ ದರೋಡೆ ಮಾಡಿದ್ದರು. ದರೋಡೆ ಮಾಡಿದ 17 ಕೆಜಿ ಚಿನ್ನವನ್ನು ತಮಿಳುನಾಡಿನ ಮಧುರೈನಲ್ಲಿರುವ ತೋಟದ ಮನೆಯ ಪಾಳು ಬಿದ್ದ ಬಾವಿಯಲ್ಲಿ ಲಾಕರ್ ನಲ್ಲಿ ಇಟ್ಟಿದ್ದರು.

ಈ ಬಗ್ಗೆ ಸುಳಿವು ಸಿಕ್ಕ ಬಳಿಕ ನಮ್ಮ ತಂಡ ಅಲ್ಲಿಗೆ ತೆರಳಿ ಚಿನ್ನವನ್ನು ವಶಪಡಿಸಿಕೊಂಡಿದೆ. ಚಿನ್ನವೆಲ್ಲ ಸಾಮಾನ್ಯ ಜನರಿಗೆ ಸೇರಿದ್ದು ಎಂದು ಐಜಿಪಿ ಡಾ.ಬಿ. ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here