Home ತಾಜಾ ಸುದ್ದಿ ‘MBA’ ವಿದ್ಯಾರ್ಥಿನಿ ಆತ್ಮಹತ್ಯೆಗೆ ಸ್ಪೋಟಕ ತಿರುವು : ಮೊಬೈಲ್ ನಲ್ಲಿತ್ತು ಸಾವಿನ ರಹಸ್ಯ!

‘MBA’ ವಿದ್ಯಾರ್ಥಿನಿ ಆತ್ಮಹತ್ಯೆಗೆ ಸ್ಪೋಟಕ ತಿರುವು : ಮೊಬೈಲ್ ನಲ್ಲಿತ್ತು ಸಾವಿನ ರಹಸ್ಯ!

0

ಬೆಳಗಾವಿ : ಕಳೆದ ಮಾರ್ಚ್ 26 ರಂದು ಕುಂದಾನಗರಿ ಬೆಳಗಾವಿಯಲ್ಲಿ ಎಂಬಿಎ ಪದವೀಧರೆ ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಬೆಳಗಾವಿಯ ನೆಹರು ನಗರದ ಪಿಜಿಯಲ್ಲಿ ನೇಣು ಬಿಗಿದುಕೊಂಡು ಯುವತಿ ಐಶ್ವರ್ಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೂಸೈಡ್‌ಗೆ ತನ್ನ ಪ್ರಿಯಕರ ಮತ್ತೋರ್ವ ಯುವತಿಯ ಲವ್ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.

ಹೌದು ವಿದ್ಯಾರ್ಥಿನಿ ಐಶ್ವರ್ಯ ಲಕ್ಷ್ಮಿ ಆತ್ಮಹತ್ಯೆ ಇದೀಗ ಸ್ಪೋಟಕ ತಿರುವು ಸಿಕ್ಕಿದೆ ಐಶ್ವರ್ಯ ಪ್ರಿಯಕರ ಆಕಾಶ್ ಬೇರೊಬ್ಬ ಯುವತಿಯನ್ನು ಲವ್ ಮಾಡುತ್ತಿದ್ದ. ಅದಕ್ಕಾಗಿ ಐಶ್ವರ್ಯ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಆಕಾಶ್ ಮತ್ತು ಐಶ್ವರ್ಯ ಲಕ್ಷ್ಮಿ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.ಇಬ್ಬರು ವಿಜಯಪುರ ಜಿಲ್ಲೆಯ ಚಡಚಣ ಮೂಲದವರು ಎಂದು ತಿಳಿದು ಬಂದಿದೆ.

ಆಕಾಶ್ ಇತ್ತೀಚಿಗೆ ಮತ್ತೊಬ್ಬ ಯುವತಿಯ ಜೊತೆಗೆ ಲವ್ ಮಾಡುತ್ತಿದ್ದ.ಈ ವಿಚಾರ ಗೊತ್ತಾಗಿ ಪಿಜಿಯಲ್ಲಿ ನೇಣು ಬಿಗಿದುಕೊಂಡು ಐಶ್ವರ್ಯ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗು ಮುನ್ನ ಆಕಾಶ್ ಗೆ ಐಶ್ವರ್ಯ ಲಕ್ಷ್ಮಿ ಮೆಸೇಜ್ ಮಾಡಿದ್ದಳು. ಮೆಸೇಜ್ ಮಾಡುತ್ತಿದ್ದಂತೆ ಆಕಾಶ ಐಶ್ವರ್ಯ ರೋಮ್ಗೆ ಬಂದಿದ್ದ ಐಶ್ವರ್ಯ ಪಿಜಿಗೆ ಬಂದು ಹೋದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ ರೂಮ್ ಬಾಗಿಲು ಒಡೆದು ಮೊಬೈಲನ್ನು ಕದ್ದುದ್ದ ಮೊಬೈಲ್ ತೆಗೆದುಕೊಂಡು ಆಕಾಶ್ ಓಡಿ ಹೋಗಿದ್ದ ಐಶ್ವರ್ಯ ಮೊಬೈಲ್ ಪರಿಶೀಲಿಸಿದಾಗ ಅಸಲಿಕ ಹಾನಿ ಬಳಕೆಗೆ ಬಂದಿದೆ ಆಕಾಶ ಬೆಳಗಾವಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಪ್ರಕರಣ ಹಿನ್ನೆಲೆ?

ಕಳೆದ ಮಾರ್ಚ್ 26 ರಂದು ಕುಂದಾನಗರಿ ಬೆಳಗಾವಿಯಲ್ಲಿ ವಿಜಯಪುರ ಜಿಲ್ಲೆಯ ಐಶ್ವರ್ಯಲಕ್ಷ್ಮೀ ಗಲಗಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಆತ್ಮಹತ್ಯೆಗೂ ಮುನ್ನ ಗೆಳತಿಯೊಂದಿಗೆ ಮಾತನಾಡಿ ರೂಮ್‌ಗೆ ಹೋಗಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಂಬಿಎ ಪದವಿ ಓದಿದ್ದ ಐಶ್ವರ್ಯ ಕಳೆದ ಮೂರು ತಿಂಗಳಿನಿಂದ ಸಾಯಿಕೃಪಾ ಪಿಜಿಯಲ್ಲಿದ್ದಕೊಂಡು, ಬೆಳಗಾವಿಯ ಎಕಸ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದಳು. ಆದರೆ, ಮಂಗಳವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದಕ್ಕೂ ಮುನ್ನಾ ಗೆಳತಿಯೊಂದಿಗೆ ಐಶ್ವರ್ಯ ಮಾತನಾಡಿ ಕಾಲ್ ಕಟ್ ಮಾಡಿದ್ದಳು. ನಂತರ ಪೋನ್ ರಿಸೀವ್ ಮಾಡದಿದ್ದಕ್ಕೆ ಪಿಜಿಗೆ ಗಾಬರಿಯಿಂದ ಬಂದಿದ್ದ ಸ್ನೇಹಿತ. ಸಿಸಿಟಿವಿಯಲ್ಲಿ ಐಶ್ವರ್ಯ ಸ್ನೇಹಿತ ಪಿಜಿಗೆ ಬರೋ ದೃಶ್ಯ ಸೆರೆಯಾಗಿದೆ. ಪಿಜಿ ರೂಮ್‌ ಬಾಗಿಲು ಒಡೆದು ನೋಡಿದಾಗ ಐಶ್ವರ್ಯಲಕ್ಷ್ಮೀ ಸೂಸೈಡ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here