Home ತಾಜಾ ಸುದ್ದಿ ರಸ್ತೆ ಅಪಘಾತಕ್ಕೊಳಗಾದವರ ನೆರವಿಗೆ ಧಾವಿಸಿದ್ರೆ ಸಿಗುತ್ತೆ 25000ರೂ. ಬಹುಮಾನ

ರಸ್ತೆ ಅಪಘಾತಕ್ಕೊಳಗಾದವರ ನೆರವಿಗೆ ಧಾವಿಸಿದ್ರೆ ಸಿಗುತ್ತೆ 25000ರೂ. ಬಹುಮಾನ

0

ಇತ್ತೀಚೆಗೆ ರಾಜ್ಯದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ‌. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ತುರ್ತು ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಾರೆ. ಅಂಥ ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸುವ ವ್ಯಕ್ತಿಗೆ ಇಪ್ಪತ್ತೈದು ಸಾವಿರ ರೂ. ಬಹುಮಾನ ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ಅಪಘಾತಕ್ಕೀಡಾಗುವ ಸಂತ್ರಸ್ತ ವ್ಯಕ್ತಿಗೂ ಒಂದೂವರೆ ಲಕ್ಷ ರೂ.ವರೆಗೂ ಧನಸಹಾಯ ನೀಡಲಾಗುತ್ತದೆ. ಮತ್ತು ಏಳು ವರ್ಷಗಳವರೆಗೆ ವೈದ್ಯರಿಂದಾಗುವ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಜನರು ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

LEAVE A REPLY

Please enter your comment!
Please enter your name here