Home ಕರಾವಳಿ ಕಡಬ: ಮಲಗಿದ ಸ್ಥಿತಿಯಲ್ಲಿ ಎರಡುವರೆ ವರ್ಷದ ಗಂಡು ಮಗು ಮೃತ್ಯು..!

ಕಡಬ: ಮಲಗಿದ ಸ್ಥಿತಿಯಲ್ಲಿ ಎರಡುವರೆ ವರ್ಷದ ಗಂಡು ಮಗು ಮೃತ್ಯು..!

0
ಕಡಬ :ಎರಡುವರೆ ವರ್ಷದ ಗಂಡು ಮಗುವೊಂದು ಆಕಸ್ಮಿಕವಾಗಿ ಮಲಗಿದಲ್ಲಿಯೇ ಮೃತಪಟ್ಟ ಘಟನೆಯೊಂದು ಕಡಬದ ಕೊಣಾಜೆ ಗ್ರಾಮದಿಂದ ವರದಿಯಾಗಿದೆ.ಉತ್ತರ ಪ್ರದೇಶ ಮೂಲದ ಕೊಣಾಜೆಯ ಮಾಲದಲ್ಲಿ ಕೆಲಸಕ್ಕೆಂದು ಬಂದು ವಾಸವಾಗಿದ್ದ  ರಾಜಾ  ಸಿಂಗ್ ಮತ್ತು ಶ್ರೀ ಮತಿ ದಿವ್ಯಾಂಶಿ ದಂಪತಿಗಳ ಪುತ್ರ ರುದ್ರ ಪ್ರತಾಪ್‌ ಸಿಂಗ್‌ ( 2 ½ ವರ್ಷ) ಮೃತಪಟ್ಟ ಮಗುಕೊಣಾಜೆ ಗ್ರಾಮದ ಮಾಲ ಎಂಬಲ್ಲಿ ಲಿಂಡೋರಾಜ್‌ರವರ  ಜಾಗದಲ್ಲಿ   ತೋಟದ ಕೆಲಸ ಮಾಡಿಕೊಂಡಿದ್ದ ಈ ದಂಪತಿಗೆ   2 ½ ವರ್ಷ ಪ್ರಾಯದ ಗಂಡುಮಗುವಿತ್ತು.ಮಾ.25 ರಂದು ಮಧ್ಯಾಹ್ನದ ವೇಳೆ ಮಗುವಿಗೆ ಊಟ ಕೊಟ್ಟು ಬಳಿಕ  ನಿದ್ದೆ ಬಂದ ಕಾರಣ ಮಲಗಿಸಿದ್ದರು.ಬಳಿಕ  ಎಬ್ಬಿಸಿದಾಗ ಮಗು ಏಳದೇ ಇದ್ದ ಕಾರಣ ಕೆಲಸ ಮಾಡಿಕೊಂಡಿದ್ದ   ಲಿಂಡೋರಾಜ್‌  ಅವರ ಕಾರಿನಲ್ಲಿ ಮಗುವನ್ನು  ಕಡಬ ಖಾಸಗಿ ಆಸ್ಪತ್ರೆಗೆ ವೈದ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಮಗುವನ್ನು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಮಗು  ಆಹಾರ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಖಾಯಿಲೆಯು ಉಲ್ಬಣಗೊಂಡು ಮೃತಪಟ್ಟಿರುವುದಾಗಿದೆ ಎಂದು ಮೃತ ಮಗುವಿನ ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ: 20/2025 ಕಲಂ: 194 BNSS ನಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here