Home ಕರಾವಳಿ ವಿಶ್ವ ಬಂಟ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ

ವಿಶ್ವ ಬಂಟ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ

0

ಮಂಗಳೂರು : ವಿಶ್ವ ಬಂಟ ಪ್ರತಿಷ್ಠಾನದಿಂದ 2024-25ನೇ ಸಾಲಿನ ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ವಿತರಣಾ ಸಮಾರಂಭ ನಗರದ ಮೋತಿಮಹಲ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಒಟ್ಟು 165 ವಿದ್ಯಾರ್ಥಿಗಳಿಗೆ 36.70 ಲಕ್ಷ ರೂ.ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ನೀಡಲಾಯಿತು. ವಿದ್ಯಾರ್ಥಿ ದತ್ತಿ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ 9 ವಿದ್ಯಾರ್ಥಿಗಳಿಗೆ 1.75 ಲಕ್ಷ ರೂ.ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಖಜಾಂಜಿ ಸಿಎ ಸುದೇಶ್ ಕುಮಾರ್ ರೈ.ಬಿ., ಯೋಜನಾ ನಿರ್ದೇಶಕ ಡಾ.ಸಂಜೀವ .ಬಿ.ರೈ, ಜೈರಾಜ್.ಬಿ.ರೈ, ರಾಮಕೃಷ್ಣ ಮಾಣಾ , ಬೂಡಿಯಾರ್ ರಾಧಾಕೃಷ್ಣ ರೈ, ಚಂದ್ರಶೇಖರ ಭಂಡಾರಿ, ಡಾ.ಪ್ರಶಾಂತ್ ಕುಮಾರ್ ರೈ, ಬಲರಾಜ್ ರೈ, ಜ್ಯೋತಿ ಆಳ್ವ, ಶಂಕರಿ ರೈ, ವರಲಕ್ಷ್ಮಿ ಮಲ್ಲಿ ಉಪಸ್ಥಿತರಿದ್ದರು.
ವಿಶ್ವ ಬಂಟ ಪ್ರತಿಷ್ಠಾನ ಕಳೆದ 28 ವರ್ಷಗಳಲ್ಲಿ 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರ ವಿದ್ಯಾಭ್ಯಾಸ ಮುಂದುವರಿಸಲು ಸಹಕರಿಸಿದೆ. ವಿದ್ಯಾರ್ಥಿ ವೇತನದ ಜತೆಗೆ ಬಡವರಿಗೆ ವೈದ್ಯಕೀಯ ನೆರವು ನೀಡುತ್ತಿದ್ದು, ಒಟ್ಟು 5 ಲಕ್ಷ ರೂ.ಹಣವನ್ನು 21 ಮಂದಿಗೆ ಒದಗಿಸಲಾಗಿದೆ. ಪ್ರತಿಷ್ಠಾನವು ಪ್ರತಿ ವರ್ಷ ಓರ್ವ ಯಕ್ಷಗಾನ ಕಲಾವಿದನನ್ನು ಸನ್ಮಾನಿಸಿ 25,000 ರೂ. ನಗದು ಹಾಗೂ ಉತ್ತಮ ಕ್ರೀಡಾಳುಗಳನ್ನು ಗುರುತಿಸಿ ಗೌರವ ಧನ ನೀಡುತ್ತಾ ಬಂದಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ
ಈ ಸಂದರ್ಭ ತಿಳಿಸಿದರು.

LEAVE A REPLY

Please enter your comment!
Please enter your name here