Home ಕ್ರೈಂ ನ್ಯೂಸ್ ಬೆಂಗಳೂರು: ಪ್ರೇಯಸಿ ತಂದೆಗೆ ಚಾಕು ಇರಿದು ಕಾರುಗಳಿಗೆ ಬೆಂಕಿ ಹಚ್ಚಿದ್ದ ರೌಡಿ & ಗ್ಯಾಂಗ್ ಸಿಸಿಬಿ...

ಬೆಂಗಳೂರು: ಪ್ರೇಯಸಿ ತಂದೆಗೆ ಚಾಕು ಇರಿದು ಕಾರುಗಳಿಗೆ ಬೆಂಕಿ ಹಚ್ಚಿದ್ದ ರೌಡಿ & ಗ್ಯಾಂಗ್ ಸಿಸಿಬಿ ಬಲೆಗೆ

0
ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಸಿನಿಮಾ ಸ್ಟೈಲ್‌ನಲ್ಲಿ ಗ್ಯಾಂಗ್ ಸಮೇತ ಯುವತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ರೌಡಿ ಶೀಟರ್ ಆ್ಯಂಗ್ ಗ್ಯಾಂಗ್ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಶನಿವಾರ 1ಗಂಟೆ ಸುಮಾರಿಗೆ ಸುಬ್ರಮಣ್ಯಪುರ ಲಿಮಿಟ್ಸ್ ರೆಸಿಡೆನ್ಸಿಯಲ್ ಏರಿಯಾದಲ್ಲಿ ಬೈಕ್‌ನಲ್ಲಿ ಮಾಸ್ಕ್ ಹಾಕ್ಕೊಂಡು ಕೈಲಿ ಲಾಂಗು, ಮಚ್ಚು, ಪೆಟ್ರೋಲ್ ಹಿಡ್ಕೊಂಡ್ ಬಂದಿದ್ದ ನಾಲ್ವರು ರೌಡಿ ಶೀಟರ್ ರಾಹುಲ್ @ ಸ್ಟಾರ್ ಆ್ಯಂಡ್‌ ಟೀಮ್ ಏಕಾಏಕಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ರು. ತಡೆಯೋಕೆ ಬಂದಿದ್ದ ಸೆಕ್ಯೂರಿಟಿಗೆ ಲಾಂಗ್ ತೋರಿಸಿ ಬೆದರಿಸಿದ್ರು. ಈ ವೇಳೆ ರಾಹುಲ್ ಪ್ರೀತಿ ಅಂತ ಹಿಂದೆ ಬಿದ್ದಿದ್ದ, ಯುವತಿ ತಂದೆ ತಡೆಯೋಕೆ ಬಂದಾಗ ಆತನಿಗೆ ಚಾಕು ಇರಿದು ಪಾರ್ಕಿಂಗ್‌ನಲ್ಲಿ ನಿಂತಿದ್ದ ಕಾರುಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗ್ಯಾಂಗ್ ಸಮೇತ ಎಸ್ಕೇಪ್ ಆಗಿದ್ರು.ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅಧಿಕಾರಿಗಳಿಗಳು ಶೀಘ್ರವಾಗಿ ಆರೋಪಿಗಳನ್ನ ಬಂಧಿಸುವಂತೆ ತಾಖೀತು ಮಾಡಿದ್ರು.‌ ಇದರ ಬೆನ್ನಲ್ಲೆ ಕಾರ್ಯಪ್ರವೃತ್ತರಾದ ಸುಬ್ರಮಣ್ಯಪುರ ಪೊಲೀಸರು ಸ್ಟಾರ್ ರಾಹುಲ್ ಬೆನ್ನತ್ತಿದ್ರು. ಇವ್ರ ಜೊತೆಗೆ ಸಿಸಿಬಿ ಪೊಲೀಸರು ರಾಹುಲ್‌ಗೆ ಬಲೆ ಬೀಸಿದ್ರು.ಸದ್ಯ ರಾಹುಲ್ ಆ್ಯಂಡ್ ಟೀಮ್ ಸಿಸಿಬಿ ಪೂರ್ವ ವಿಭಾಗ ಸಂಘಟಿತ ಅಪರಾಧ ದಳ ಅಧಿಕಾರಿ ಸಿಬ್ಬಂದಿ ಬೀಸಿದ ಬಲೆಗೆ ಬಿದ್ದಿದ್ದಾನೆ. ರಾಹುಲ್‌ನ ಜೊತೆಗೆ ರೌಡಿ ಶೀಟರ್ ಮುನಿರಾಜ @ ಹೂವ ,ಪ್ರವೀಣ್ ಹಾಗೂ ವಿಲಿಯಮ್ಸ್ ರನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.ಇನ್ನೂ ಈ ರಾಹುಲ್ ನಟೋರಿಯಸ್ ರೌಡಿ ಶೀಟರ್ ಕುಳ್ಳು ರಿಜ್ವಾನ್ ಶಿಷ್ಯನಾಗಿದ್ದು, ಇತನ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಯಾವ ಪ್ರಕರಣದಲ್ಲೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಎಲ್ಲಾ ಪ್ರಕರಣದಲ್ಲೂ ರಾಹುಲ್ ವಿರುದ್ದ ಪ್ರೊಕ್ಲಮೇಷನ್ ಜಾರಿಯಾಗಿದೆ.

LEAVE A REPLY

Please enter your comment!
Please enter your name here