ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಕುಪ್ಪೆಟ್ಟು ಬರ್ಕೆ ಕರ್ಪೆ ಇಲ್ಲಿನ ಪ್ರತಿಷ್ಠಾ ವರ್ದಂತಿ ಮಹೋತ್ಸವ ಹಾಗೂ ನೇಮೋತ್ಸವ ನಿಮಿತ್ತ ಇಂದು ಹಸಿರು ಹೊರೆ ಕಾಣಿಕೆ ವಿವಿಧ ಗ್ರಾಮಗಳಿಂದ ಸಮರ್ಪಿಸಲಾಯಿತು.



ಕೊಳವೂರು ಗ್ರಾಮದ ಕಡೆಗುಂಡ್ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೊದಲ್ಗೊಂಡು ಶ್ರೀ ರಾಮಾಂಜನೆಯ ಭಜನಾ ಮಂದಿರ ರತ್ನಗಿರಿ ಹಾಗೂ ಕಿಲೆಂಜಾರು ಗ್ರಾಮದಿಂದ ಶ್ರೀ ನಾರಾಯಣ ಗುರು ಮಂದಿರ ನೆಲಚ್ಚಿಲ್ ಹಾಗೂ ಮುತ್ತೂರು ಗ್ರಾಮದಿಂದ ಮಾರ್ಗದಂಗಡಿ ಗಣೇಶ್ ಕಟ್ಟೆ ಹಾಗೂ ಶ್ರೀ ದುರ್ಗೆಶ್ವರಿ ದೇವಸ್ಥಾನ ಕುಪ್ಪೆಪದವು ಇಲ್ಲಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು .


ಈ ಸಂಧರ್ಭದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ , ಉಪಾಧ್ಯಕ್ಷರಾದ ಶ್ರೀಮತಿ ಸುಷ್ಮಾ ,ಸದಸ್ಯರಾದ ಸತೀಶ್ ಪೂಜಾರಿ ಬಳ್ಳಾಜೆ , ಸದಸ್ಯರಾದ ಜಗದೀಶ್ ದುರ್ಗಾಕೊಡಿ , ಗ್ರಾಮದ ಮುಖಂಡರುಗಳಾದ ಶರತ್ ಕುಮಾರ್ ಶೆಟ್ಟಿ ,ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ಹಾಗೂ ಪದಾಧಿಕಾರಿಗಳು , ದುರ್ಗೆಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರವೀಣ್ ಕುಮಾರ್ ಅಗರಿ , ರಾಮಂಜನೆಯ ಭಜನಾ ಮಂದಿರ ಅಧ್ಯಕ್ಷ ತಾರನಾಥ್ ಉಗ್ರಾಯಿ ಹಾಗೂ ಸಮಿತಿ ಸದಸ್ಯರು , ಮಹಾಬಲ ಸಾಲ್ಯಾನ್ , ಸದಾನಂದ ಶೆಟ್ಟಿ ಕುಲವೂರು ಗುತ್ತು.ಕಡೆಗುಂಡ್ಯ ದೇವಸ್ಥಾನದ ಆಡಳಿತ ಮೊಕ್ತೇಸರಾರದ ಭವಾನಂದ ಶೆಟ್ಟಿ , ಅಜಿತ್ ಕುಮಾರ್ ಜೈನ್ , ವಿಜಯ್ ಶೆಟ್ಟಿ ಕೊಳವೂರು ,ವಿನೋದ್ ಕುಮಾರ್ ಅಂಬೆಲೊಟ್ಟು , ಚಂದ್ರಶೇಖರ್ ತುಂಬೆಮಜಲ್ , ದೀಪಕ್ ಮುತ್ತೂರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು .