Home ತಾಜಾ ಸುದ್ದಿ 10 ವರ್ಷ ಜೈಲು, 5 ಲಕ್ಷ ದಂಡ, ಜಾಮೀನು ರಹಿತ ವಾರೆಂಟ್- ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ

10 ವರ್ಷ ಜೈಲು, 5 ಲಕ್ಷ ದಂಡ, ಜಾಮೀನು ರಹಿತ ವಾರೆಂಟ್- ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ

0

ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ತಡಗೆ ಕಠಿಣ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹಲವು ಸುತ್ತಿನ ಸಭೆ ಬಳಿಕ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಹಾವಳಿ ತಡೆಗೆ ಮೂಗುದಾರ ಹಾಕಲು ಮುಂದಾಗಿದೆ. ಕರ್ನಾಟಕ ಮೈಕ್ರೋ ಫೈನಾನ್ಸ್‌ (ಬಲವಂತ ಕ್ರಮಗಳ ನಿಯಂತ್ರಣ) ಸುಗ್ರೀವಾಜ್ಞೆ – 2025′ ಕರಡು ಪ್ರತಿ ನಾಳೆ ರಾಜ್ಯಪಾಲರಿಗೆ ರವಾನೆಯಾಗಲಿದೆ.

ಸುಗ್ರೀವಾಜ್ಞೆಯಲ್ಲಿ ಪ್ರಮುಖ ಅಂಶಗಳು *ನಿಯಮ ಮೀರಿ ಸಾಲ ವಸೂಲಾತಿಗೆ ಮುಂದಾದರೆ ಜಾಮೀನು ರಹಿತ ವಾರೆಂಟ್ ಜಾರಿ

*10 ವರ್ಷ ಜೈಲು, 5 ಲಕ್ಷ ರೂಪಾಯಿ ದಂಡ

*ನೊಂದಣಿಯಾಗದೇ ವ್ಯವಹಾರ ಮಾಡಿ ಸಾಲಗಾರರಿಗೆ ಕಿರುಕುಳ ನೀಡಿದರೆ ಸಾಲ ಮನ್ನಾ ( ಅಸಲು ಬಡ್ಡಿ ಎಲ್ಲವೂ ಮನ್ನಾ)

*ಮೈಕ್ರೋ ಫೈನಾನ್ಸ್‌ಗಳು ಕಡ್ಡಾಯವಾಗಿ ಸ್ಥಳೀಯ ಕಚೇರಿಯನ್ನು ಹೊಂದಿರಬೇಕು. ಹೀಗೆ ಹಲವಾರು ಕಠಿಣ ಕಾನೂನು ಕ್ರಮಗಳು ಸುಗ್ರೀವಾಜ್ಞೆಯಲ್ಲಿದೆ. ಈ

ಗಾಗಲೇ ಈ ಸುಗ್ರೀವಾಜ್ಞೆಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದು ನಾಳೆ ಕಾನೂನು ಇಲಾಖೆ ರಾಜಭವನಕ್ಕೆ ಅಧಿಕೃತವಾಗಿ ಕಳುಹಿಸಿಕೊಡಲಿದೆ.

ಬಳಿಕ ಎರಡ್ಮೂರು ದಿನಗಳಲ್ಲಿ ಸುಗ್ರೀವಾಜ್ಞೆಗೆ ರಾಜ್ಯಪಾಲರದ ಅಂಕಿತ ಬಿಳುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here