Home ಕರಾವಳಿ ಸಾಲದ ಕಿರುಕುಳಕ್ಕೆ ಸಿಲುಕಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ!

ಸಾಲದ ಕಿರುಕುಳಕ್ಕೆ ಸಿಲುಕಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ!

0

ಪಡುಬಿದ್ರೆ : ಯುವಕನೊಬ್ಬ ಸಾಲದ ಚಿಂತೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಪಡುಬಿದ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ನಸ್ರುಲ್ಲಾ(29) ಎಂದು ಗುರುತಿಸಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಮೂರು ತಿಂಗಳ ಹಿಂದೆ ಊರಿಗೆ ಮರಳಿದ್ದರು.

ನಸ್ರುಲ್ಲಾ ಅವರು ಪಡೆದಿದ್ದ ಮನೆ ಸಾಲ, ವೈಯಕ್ತಿಕ ಸಾಲಗಳನ್ನು ಹಿಂತಿರುಗಿಸಲು ಹಣಕಾಸು ಸಂಸ್ಥೆಯ ಮಂದಿ ಹುಡುಕಿಕೊಂಡು ಇವರ ಮನೆಗೆ ಬರುತ್ತಿದ್ದರು. ತಮ್ಮ ಪತ್ನಿಯ ಆಭರಣಗಳನ್ನೂ ಅಡವಿಟ್ಟಿದ್ದ ನಸ್ರುಲ್ಲಾ, ಕೆಲ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬಂದಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಸಾಲಗಾರರು ನಿರಂತರವಾಗಿ ಮನೆಗೆ ಬರುತ್ತಿರುವುದರಿಂದ ಮಾನಸಿಕವಾಗಿ ನೊಂದಿದ್ದರು. ಬುಧವಾರ ಬೆಡ್ ರೂಂನಲ್ಲಿ ಫ್ಯಾನಿಗೆ ಚೂಡಿದಾರದ ವೇಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here