Home ಕರಾವಳಿ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 1 ಹಾಗೂ 2ನೇ ಆರೋಪಿ ಜಾಮೀನು ಅರ್ಜಿ ತಿರಸ್ಕೃತ

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 1 ಹಾಗೂ 2ನೇ ಆರೋಪಿ ಜಾಮೀನು ಅರ್ಜಿ ತಿರಸ್ಕೃತ

0

ಪುತ್ತೂರು : ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 1 ಮತ್ತು 2ನೇ ಆರೋಪಿಗಳಾದ ಚೇತನ್ ಹಾಗೂ ಮನೀಷ್ ಅವರ ಅರ್ಜಿಯನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿದೆ.

ಜಾಮೀನಿಗೆ ಅರ್ಜಿ ಸಲ್ಲಿಸಿದ್ದರಿಂದ ಸುದೀರ್ಘ ಪ್ರತಿವಾದ ನಡೆದು ಇದೀಗ ಮಾನ್ಯ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿ ಅರ್ಜಿಯನ್ನು ತಿರಸ್ಕೃತಗೊಳಿಸಿದೆ.

ನ. 6ರಂದು ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ಅಕ್ಷಯ್ ಕಲ್ಲೇಗ ಅವರ ಹತ್ಯೆಯಾಗಿತ್ತು.

ದೂರುದಾರರ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ಪ್ರತಿಷ್ಠಿತ ಖ್ಯಾತ ನ್ಯಾಯವಾದಿಗಳಾದ ಮಹೇಶ್ ಕಜೆ ಸಮರ್ಥವಾಗಿ ವಾದಮಂಡಿಸಿದ್ದರು.

ಕಲ್ಲೇಗ ಟೈಗರ್ಸ್ ಟೀಂನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಭೀರಕ ಕೊಲೆ ಪುತ್ತೂರಿಗರನ್ನು ಬೆಚ್ಚಿಬೀಲಿಸಿತ್ತು. ಅಕ್ಷಯ್ ಕಲ್ಲೇಗರ ಮೈಮೇಲೆ ಇದ್ದ 50 ಕ್ಕೂ ಹೆಚ್ಚು ಗಾಯದ ಗುರುತುಗಳು ಇದೊಂದು ಭೀಕರ ಕೊಲೆ ಪ್ರಕರಣ ಎಂಬುದನ್ನು ಎತ್ತಿ ತೋರಿಸಿವಂತಿದೆ,  ಪೋಲೀಸರು ಕಲೆ ಹಾಕಿದ ಪ್ರಮುಖ ಸಾಕ್ಷಿಗಳು ಮಹತ್ವದ ಪಾತ್ರ ವಹಿಸಲಿದೆ. 55 ಸಾಕ್ಷಿಗಳು ಈ ಪ್ರಕರಣದಲ್ಲಿ ಇದ್ದು, ಸಮರ್ಥವಾದ ಸಾಕ್ಷಾಧಾರಗಳು ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಪಮುಖ ಸಾಕ್ಷಾಧಾರಗಳ ತನಿಖೆ ನಡೆಯುವ ತನಕ ಆರೋಪಿಗಳನ್ನು ಹೊರ ಬಿಡುವುದು ಸರಿಯಲ್ಲ ಸಾಕ್ಷಿದಾರನ್ನು ಬೆದರಿಸುವ ಹಾಗೂ ಭಯಪಡಿಸುವ ಎಲ್ಲಾ ಸಾಧ್ಯತೆಗಳು ಇದೆ ಎಂಬುದು ಅವರ ಕೊಲೆ ಮಾಡಿದ ರೀತಿ, ಮತ್ತು ಕ್ರೌರ್ಯದಿಂದ ಕಂಡುಬರುತ್ತದೆ. ಈ ಮೂರು ಪ್ರಮುಖ ಅಂಶಗಳನ್ನು  ಗಣನೆಗೆ ತೆಗೆದುಕೊಂಡು ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

LEAVE A REPLY

Please enter your comment!
Please enter your name here