Home ಕರಾವಳಿ ನಾಳೆ (ನ.02)ಕೊಂಬೆಟ್ಟು ಕ್ರೀಡಾಂಗಣದಲ್ಲಿ ಅಶೋಕ ಜನಮನ ಕಾರ್ಯಕ್ರಮ: ವಾಹನ ಸಂಚಾರ ಮಾರ್ಗ ಬದಲಾವಣೆ; ಇಲ್ಲಿದೆ ಡಿಟೇಲ್ಸ್

ನಾಳೆ (ನ.02)ಕೊಂಬೆಟ್ಟು ಕ್ರೀಡಾಂಗಣದಲ್ಲಿ ಅಶೋಕ ಜನಮನ ಕಾರ್ಯಕ್ರಮ: ವಾಹನ ಸಂಚಾರ ಮಾರ್ಗ ಬದಲಾವಣೆ; ಇಲ್ಲಿದೆ ಡಿಟೇಲ್ಸ್

0

ಪುತ್ತೂರು: ನವೆಂಬರ್ 02 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನ ಮನ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಲಕ್ಷಾಂತರ ಜನ ಸೇರುವ ಹಿನ್ನಲೆ ಸುಗಮ ಸಂಚಾರಕ್ಕೆ ವಾಹನ ಸಂಚಾರ ಮಾರ್ಗಗಳ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮಯೂರ ಜಂಕ್ಷನ್ ನಿಂದ ಕೊಂಬೆಟ್ಟು ಮಾರ್ಗವಾಗಿ ಬೊಳ್ವಾರು ಕಡೆಗೆ ಹಾದು ಹೋಗುವ ರಸ್ತೆಯನ್ನು ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯನ್ನು ಬೆಳಗ್ಗೆ 7 ಗಂಟೆಯಿಂದ 6 ಗಂಟೆಯವರೆಗೆ ಮಯೂರ ಜಂಕ್ಷನ್ ನಿಂದ ಬೊಳುವಾರು ಆಂಜನೇಯ ದೇವಸ್ಥಾನದ ಕಡೆಗೆ ಸಂಚರಿಸಲು ಏಕಮುಖ ರಸ್ತೆ ಹಾಗು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯನ್ನು ಮುಖ್ಯ ರಸ್ತೆಯಿಂದ ದೇವಸ್ಥಾನದ ಕಡೆಗೆ ಸಂಚರಿಸಲು ಏಕಮುಖ ರಸ್ತೆಯನ್ನಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here