Home ಕರಾವಳಿ ಹಸೆಮಣೆ ಏರಲು ಸಜ್ಜಾದ ನಟ ಡಾಲಿ ಧನಂಜಯ್‌

ಹಸೆಮಣೆ ಏರಲು ಸಜ್ಜಾದ ನಟ ಡಾಲಿ ಧನಂಜಯ್‌

0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಡಾಲಿ ಧನಂಜಯ್ ಅವರು 2025ರ ಫೆಬ್ರವರಿ 16ರಂದು ಹಸೆಮಣೆ ಏರಲಿದ್ದಾರೆ. ಈ ಮೂಲಕ ದೀಪಾವಳಿ ಹಬ್ಬಕ್ಕೆ ನಟ ಧನಂಜಯ್ ಫ್ಯಾನ್ಸ್ ಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.

ವಿಶೇಷ ಎಂದರೆ ನಟ ಧನಂಜಯ್ ಮದುವೆ ಆಗುತ್ತಿರುವ ಹುಡುಗಿ ಧನ್ಯತಾ ಚಿತ್ರರಂಗದವರಲ್ಲ. ಬದಲಾಗಿ ಧನಂಜಯ್ ಅವರ ಭಾವಿ ಪತ್ನಿ ಸ್ತ್ರೀರೋಗ ತಜ್ಞೆ. ಇದೀಗ ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡೀಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಧನಂಜಯ್ ಮತ್ತು ಧನ್ಯತಾ ಇವರಿಬ್ಬರಿಗೆ ಅನೇಕ ವರ್ಷಗಳ ಪರಿಚಯ ಇದೆ. ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ವಿವಾಹವಾಗುತ್ತಿದ್ದಾರೆ.

ಇನ್ನು ಧನಂಜಯ್ ಅವರ ಭಾವಿ ಪತ್ನಿ ಧನ್ಯತಾ ಚಿತ್ರದುರ್ಗ ಮೂಲದವರು. ಅವರು ಓದಿದ್ದು ಮೈಸೂರಿನಲ್ಲಿ. ಸದ್ಯ ಧನಂಜಯ್ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ ಧನಂಜಯ್ ಅವರು ಭಾವಿ ಪತ್ನಿಗೆ ಸುಂದರ ಸಾಲುಗಳನ್ನು ಕೂಡ ಬರೆದಿದ್ದಾರೆ. ಇದೀಗ ಈ ಮುದ್ದಾದ ಜೋಡಿಗೆ ಫ್ಯಾನ್ಸ್ ಗಳು ಶುಭ ಹಾರೈಸುತ್ತಿದ್ದಾರೆ.

LEAVE A REPLY

Please enter your comment!
Please enter your name here