Home ಕರಾವಳಿ ಪಿಲಿಕುಳ ನಿಸರ್ಗಧಾಮದಲ್ಲಿ ಭಾರಿ ಬೆಂಕಿ ಅವಘಡ- ಹೊತ್ತಿ ಉರಿದ 2 ವಾಹನ

ಪಿಲಿಕುಳ ನಿಸರ್ಗಧಾಮದಲ್ಲಿ ಭಾರಿ ಬೆಂಕಿ ಅವಘಡ- ಹೊತ್ತಿ ಉರಿದ 2 ವಾಹನ

0

ಮಂಗಳೂರು: ಪಿಲಿಕುಳ ನಿಸರ್ಗಧಾಮದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾಗಿವೆ.

ಇಂದು ಬುಧವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಟಿಕೆಟ್ ಕೌಂಟರ್ ಬಳಿಯ ವರ್ಕ್ ಶಾಪ್ ನಲ್ಲಿ ಚಾರ್ಜ್ ಗೆ ಹಾಕಿದ್ದ ಒಂದು ಎಲೆಕ್ಟ್ರಿಕ್ ವಾಹನದಲ್ಲಿ ಸಾರ್ಟ್ ಸರ್ಕಿಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು ಇದರಿಂದ ಹೊತ್ತಿದ್ದ ಬೆಂಕಿ ವ್ಯಾಪಿಸಿ ಪಕ್ಕದಲ್ಲಿದ್ದ ಮತ್ತೊಂದು ವಾಹನವನ್ನೂ ಸುಟ್ಟು ಹಾಕಿದೆ.  ಒಟ್ಟು ಎರಡು ವಾಹನಗಳು ಸಂಪೂರ್ಣ ಭಸ್ಮವಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಹತ್ತಕ್ಕೂ ಅಧಿಕ  ಎಲೆಕ್ಟ್ರಿಕ್ ವಾಹನಗಳಿದ್ದರೂ  ಅದೃಷ್ಟವಶಾತ್ ಭಾರೀ ದೊಡ್ಡ ಅನಾಹುತ ತಪ್ಪಿದೆ. ಎರಡು ವಾಹನಗಳು ಹೊತ್ತಿ ಉರಿಯುತ್ತಿದ್ದರೂ  ಅಗ್ನಿ ಶಾಮಕ ದಳ ಕ್ಲಪ್ತ ಸಮಯಕ್ಕೆ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಲಿಕುಳದ ಸಿಬ್ಬಂದಿಗಳೇ ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದರು.  ಘಟನಾ ಸ್ಥಳಕ್ಕೆ ಕಾವೂರು ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here