Home ಕರಾವಳಿ ಪುತ್ತೂರು : ಕೋಳಿ ಅಂಕಕ್ಕೆ ಖಾಕಿ ರೈಡ್, 5 ಹುಂಜಗಳೊಂದಿಗೆ 5 ಜನ ವಶಕ್ಕೆ..!

ಪುತ್ತೂರು : ಕೋಳಿ ಅಂಕಕ್ಕೆ ಖಾಕಿ ರೈಡ್, 5 ಹುಂಜಗಳೊಂದಿಗೆ 5 ಜನ ವಶಕ್ಕೆ..!

0

ಪುತ್ತೂರು : ಗುಡ್ಡಗಾಡು ಪ್ರದೇಶದಲ್ಲಿ  ರಾಜರೋಷವಾಗಿ  ನಡೆಯುತ್ತಿದ್ದ ಕೋಳಿ ಅಂಕ  (Cock Fight) ಕ್ಕೆ  ಪುತ್ತೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದು ಅಂಕದ ಕೋಳಿಗಳೊಂದಿಗೆ ಜನರನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಒಳಮೊಗ್ರು ಗ್ರಾಮ ಬಳಿಯ  ಗೇರುಬೀಜ ನೆಡುತೋಪು ಗುಡ್ಡದಲ್ಲಿ ಈ  ಕೋಳಿ ಅಂಕ ರಾಜರೋಷವಾಗಿ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಪೊಲೀಸರು ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದಿರುವ ಘಟನೆ ಒಳಮೊಗ್ರು ಗ್ರಾಮದಿಂದ ವರದಿಯಾಗಿದೆ.  ಒಳಮೊಗ್ರು ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧಾರಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿಯವರು ದಾಳಿ ನಡೆಸಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ  5 ಅಂಕದ ಹುಂಜ ಮತ್ತು ರೂ.7710  ಹಾಗೂ ಐವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here