Home ಕರಾವಳಿ ಬೆಳ್ತಂಗಡಿ: ದನ ಅಕ್ರಮ ಸಾಗಾಟ- ಇಬ್ಬರ ಬಂಧನ

ಬೆಳ್ತಂಗಡಿ: ದನ ಅಕ್ರಮ ಸಾಗಾಟ- ಇಬ್ಬರ ಬಂಧನ

0

ಬೆಳ್ತಂಗಡಿ: ಚಿಕ್ಕಮಗಳೂರಿನ ಕೊಟ್ಟಿಗೆರೆಯಿಂದ ವಿಟ್ಲ ತಾಲೂಕಿನ ಸಾಲೆತ್ತೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹೋರಿ ಮತ್ತು ಒಂದು ಗೋವುವನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸುವ ಮೂಲಕ ಮದ್ದಡ್ಕದ ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ ಮಾಡಲಾಗಿದೆ.


ವಶಕ್ಕೆ ಪಡೆದಿರುವ ಹೋರಿ ಹಾಗೂ ಗೋಮಾತೆ ಸಾಲೆತ್ತೂರಿನ ಅನ್ಯಕೋಮಿನ ವ್ಯಕ್ತಿಯೊಬ್ಬರಿಗೆ ಸೇರಿರುವುದೆಂದು ಸುದ್ದಿ ಹರಡುತ್ತಿದೆ. ಬಂಧಿತ ಆರೋಪಿಗಳನ್ನು ಸಚಿನ್ ಬಣ್ಕಲ್‌‌‌ ಹಾಗೂ ಅಶ್ವತ್ ಎಂದು ಗುರುತುಸಲಾಗಿದೆ.

ಕರ್ನಾಟಕದ ಬೇರೆ ಬೇರೆ ಪ್ರದೇಶದಿಂದ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿರುವ ಒಂದು ಮಾಫಿಯಾ ಸಾಲೆತ್ತೂರಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹಿಂದು ಕಾರ್ಯಕರ್ತರು ತಿಳಿಸಿದ್ದಾರೆ. ಮುಖ್ಯವಾಗಿ ಕೇರಳದ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುವುದು ನಿತ್ಯ ನಿರಂತರವಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದರು.

ವಶಕ್ಕೆ ಪಡೆದಿರುವ ವಾಹನದ ನೋಂದಣಿ ಸಂಖ್ಯೆ- KA16 D6960. ಬೆಳ್ತಂಗಡಿ ಪೊಲೀಸ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಘಟನಾ ಸ್ಥಳದಲ್ಲಿ ಸೇರಿರುವ ಹಿಂದು ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

LEAVE A REPLY

Please enter your comment!
Please enter your name here