ಮಂಗಳೂರು: ಕಾಂಗ್ರೆಸ್ ಸರಕಾರದಿಂದ ಪೊಲೀಸರನ್ನು ಬಳಸಿಕೊಂಡು ಹಿಂದೂ ಕಾರ್ಯಕರ್ತರನ್ನ ಹೆದರಿಸುವ ಪ್ರಯತ್ನ ರಾಜ್ಯದಲ್ಲಿ ಆರಂಭವಾಗಿದ್ದು ಹಿಂದೂಗಳಿಗೆ ಸುರಕ್ಷತೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೆಶ್ ಚೌಟ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಿಂದೂ ಮುಖಂಡನ ಮೇಲೆ ಪೊಲೀಸ್ ಅಧಿಕಾರಿಯಿಂದಲೂ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ಪ್ರಕರಣ ಇತ್ಯರ್ಥವಾಗುವ ಹೊತ್ತಲ್ಲಿ ಪೊಲೀಸ್ ಅಧಿಕಾರಿ ನೇರವಾಗಿ ಹಿಂದೂ ಕಾರ್ಯಕರ್ತನ ಮೇಲೆ ಕೈ ಮಾಡಿದ್ದಾರೆ. ಪೊಲೀಸ್ ಠಾಣೆಯ ಒಳಗಡೆ ಕೂಡ ಯಾರಿಗೂ ಸುರಕ್ಷತೆ ಇಲ್ಲದ ವಾತಾವರಣ ನಿರ್ಮಾಣವಾಗಿದ್ದು ಇದರ ಹಿಂದೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ಕರ್ತವ್ಯ ಮಾಡಬೇಕೇ ಹೊರತು ಸರ್ಕಾರದ ಕೈಗೊಂಬೆಯಾಗಿರಬಾರದು ಎಂದು ಕಿವಿ ಮಾತು ಹೇಳಿದ್ದಾರೆ.
ಇಂದು ರಾಜ್ಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಆದ್ರೆ ಕರ್ನಾಟಕ ರಾಜ್ಯ ಇವತ್ತು ದುಃಖ ಮತ್ತು ಬೇಸರದಿಂದ ಈ ಜಯಂತಿ ಆಚಾರಿಸುವಂತಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಇದಕ್ಕೆ ಕಾರಣರಾಗಿದ್ದಾರೆ. ನಿಗಮದ ಅಭ್ಯೋಧಯಕ್ಕೆ ಇಟ್ಟ ಹಣ ವನ್ನು ಕಾಂಗ್ರೆಸ್ ತನ್ನ ಚುನಾವಣಾ ಖರ್ಚಿಗೆ ಬಳಸಿದೆ ಎಂದು ಆರೋಪಿಸಿದರು.. ಮಾಜಿ ಸಚಿವ ನಾಗೇಂದ್ರ ಬಿಡುಗಡೆಯಾಗಿ ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಬ್ರಿಜೇಶ್ ಚೌಟ ವಾಲ್ಮೀಕಿ ಹಗರಣ ಆರೋಪಿಯಿಂದ ಸಿಎಂ ಶಾಲು ಸನ್ಮಾನ ಸ್ವೀಕರಿಸುತ್ತಾರೆ ಅಂದ್ರೆ ಏನು ಆರ್ಥ ? ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎ ಟಿ ಎಂ ಇದ್ದಂತೆ. ಮಹಾರಾಷ್ಟ್ರ ಚುನಾವಣಾ ಖರ್ಚಿಗಾಗಿ ಸಿಎಂ ನಾಗೇಂದ್ರ ಜೊತೆ ಚರ್ಚೆ ಮಾಡುತ್ತಿರಬಹುದು. ಯಾವ ರೀತಿ ಹಣ ಕೊಳ್ಳೆಹೊಡೆಯೋದು ಎಂದು ಚರ್ಚಿಸುತ್ತಿರಬಹುದು. ಸಿದ್ದರಾಮಯ್ಯ ಈಗ ಯಾವ ನಿಗಮದ ಮೇಲೆ ದೃಷ್ಟಿ ಇಟ್ಟಿದ್ದಾರೆ ಗೊತ್ತಿಲ್ಲ. ವಾಲ್ಮೀಕಿ ಜಯಂತಿಯ ದಿನದಂದು ನಾಗೇಂದ್ರ ಬಿಡುಗಡೆಯಾಗಿದ್ದು ಗಾಯದ ಮೇಲೆ ಉಪ್ಪು ಹಾಕಿದಂತಾಗಿದೆ ಎಂದು ಪ್ರತಿಕ್ರೀಯಿಸಿದ್ದಾರೆ. ವಾಲ್ಮೀಕಿ ನಿಗಮ ಹಗರಣ ಮೂಲಕ ಕಾಂಗ್ರೆಸ್ ಭ್ರಷ್ಟಚಾರಕ್ಕೆ ಹೊಸ ವ್ಯವಸ್ಥೆ ಸೃಷ್ಟಿಸಿದೆ.ಆರೋಪಿ ನಾಗೇಂದ್ರ ಸಿಎಂ ಮನೆಗೆ ಹೋಗಿರುವುದು ನಾವೆಲ್ಲಾ ತಲೆ ತಗ್ಗಿಸೋ ಹಾಗೇ ಹಾಗಿದೆ. ನಾಗೇಂದ್ರ ಆರೋಪ ಮುಕ್ತವಾದ ಮೇಲೆ ಮೆರವಣಿಗೆ ಮಾಡ್ಲಿ ಅಥವಾ ಬಳ್ಳಾರಿಗೆ ಹೋದ ಹಾಗೆ ಪಾದಯಾತ್ರೆ ಮಾಡಲಿ ನಮ್ದು ಏನೂ ಅಭ್ಯಂತರವಿಲ್ಲ ಎಂದರು.