Home ಕರಾವಳಿ ಮಂಗಳೂರು : ‘ಹಿಂದೂ ಧರ್ಮದ’ ಒಂದು ಸಮುದಾಯದಲ್ಲಿ 1ಲಕ್ಷ ಹೆಣ್ಣುಮಕ್ಕಳು ‘ವೇಶ್ಯೆಯರಿದ್ದಾರೆ’- ಅರಣ್ಯಾಧಿಕಾರಿ ಸಂಜೀವ ಪೂಜಾರಿ...

ಮಂಗಳೂರು : ‘ಹಿಂದೂ ಧರ್ಮದ’ ಒಂದು ಸಮುದಾಯದಲ್ಲಿ 1ಲಕ್ಷ ಹೆಣ್ಣುಮಕ್ಕಳು ‘ವೇಶ್ಯೆಯರಿದ್ದಾರೆ’- ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ದೂರು ದಾಖಲು

0

ಮಂಗಳೂರು : ಹಿಂದೂ ಧರ್ಮದಲ್ಲಿ ಒಂದು ಸಮುದಾಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಹೆಣ್ಣು ಮಕ್ಕಳು ವೇಶ್ಯೆಯರಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಹಿಂದೂ ಸಂಘಟನೆಯ ಕಾರ್ಯಕರ್ತ ಸುರೇಶ್ ಎಂಬುವರ ಜೊತೆ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ದೂರವಾಣಿ ಮುಖಾಂತರ ಮಾತನಾಡುವಾಗ ಈ ಒಂದು ಹೇಳಿಕೆ ನೀಡಿದ್ದು ಅಧಿಕಾರಿಯ ಈ ಹೇಳಿಕೆಗೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.

 

ದೂರವಾಣಿಯಲ್ಲಿ ಮಾತನಾಡುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಮಾಜಕ್ಕೆ ಸೇರಿದ ಒಂದು ಲಕ್ಷ ಹುಡುಗಿಯರು ವೇಶ್ಯೆಯಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆಗಳಿವೆ. ಹಿಂದುತ್ವದ ಹುಡುಗರು ವೇಶ್ಯೆಯರನ್ನಾಗಿ ಮಾಡಿದ್ದಾರೆ. ಒಂದು ಸಮಾಜದ ಒಂದು ಲಕ್ಷ ಹುಡುಗಿಯರು ವೇಶ್ಯೆಯರಾಗಲು ಹಿಂದೂ ಸಂಘಟನೆಯ ಯುವಕರು ಕಾರಣರಾಗಿದ್ದಾರೆ. ಭಜನೆ ಮಾಡಿದ ಹಿಂದೂ ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದೂ ಹುಡುಗರು ಎಂದು ಅಶ್ಲೀಲವಾಗಿ ಮಾತನಾಡಿದ್ದಾರೆ.

ಹಿಂದೂ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ತಕ್ಷಣ ಆತನನ್ನು ಸೇವೆಯಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದು, ಸಂಜೀವ ಪೂಜಾರಿ ಕಾಣಿಯೂರು ಹೇಳಿರುವ ಆಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್​​ ಆಗಿದೆ. ಆಡಿಯೋ ವೈರಲ್ ಬೆನ್ನಲ್ಲೇ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಬೆಳ್ಳಾರೆ ಪೊಲೀಸ್​ ಠಾಣೆ ಸೇರಿದಂತೆ ಎರಡು ಕಡೆ ಪ್ರತ್ಯೇಕ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here