
ಬೆಳ್ತಂಗಡಿ: ಕೊಕ್ರಾಡಿ ಗ್ರಾಮದ ಕುಂಟಾಲ್ ಕಟ್ಟೆ ಕ್ರಾಸ್ ನಲ್ಲಿ ಓಮ್ನಿ ಕಾರು ಹಾಗೂ ಬೈಕ್ ನಡುವೆ ಅಪಘಾತ ನಡೆದ ಘಟನೆ ಅ.16 ರಂದು ನಡೆದಿದೆ.



ಬೈಕ್ ಹಾಗೂ ಓಮ್ನಿ ಕಾರು ಎದುರು ಬದುರಾಗಿ ಡಿಕ್ಕಿ ಹೊಡೆದ ಪರಿಣಾಮ ಹೊಡೆತದ ರಭಸಕ್ಕೆ ರಸ್ತೆಗೆ ಬಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.


ಬೈಕ್ ಸವಾರನನ್ನು ಹೇಮಚಂದ್ರ ಎಂದು ಗುರುತಿಸಲಾಗಿದೆ.