Home ಕರಾವಳಿ ಮಂಗಳೂರು: ತಲೆಗೆ ಕಲ್ಲು ಎತ್ತಿ ಹಾಕಿ ಖಾಸಗಿ ಬಸ್ ನಿರ್ವಾಹಕನ ಕೊಲೆ

ಮಂಗಳೂರು: ತಲೆಗೆ ಕಲ್ಲು ಎತ್ತಿ ಹಾಕಿ ಖಾಸಗಿ ಬಸ್ ನಿರ್ವಾಹಕನ ಕೊಲೆ

0

ಮಂಗಳೂರು: ಸ್ಟೇಟ್‌ ಬ್ಯಾಂಕ್‌ನ ಇಂದಿರಾ ಕ್ಯಾಂಟೀನ್‌ ಪರಿಸರದಲ್ಲಿ ಖಾಸಗಿ ಬಸ್‌ ನಿರ್ವಾಹಕರೊಬ್ಬನ ಶವ  ಪತ್ತೆಯಾಗಿದೆ.


ಮಂಗಳೂರು – ವಿಟ್ಲ ಮಧ್ಯೆ ಸಂಚರಿಸುತ್ತಿದ್ದ ಫಲ್ಗುಣಿ, ಸೆಲಿನಾ ಬಸ್ಸುಗಳಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ರಾಜೇಶ್‌ (30) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇಂದಿರಾ ಕ್ಯಾಂಟೀನ್‌ ಪರಿಸರದಲ್ಲಿ ಅನಾಥ ಸ್ಥಿತಿಯಲ್ಲಿ ಕಂಡಕ್ಟರ್‌ ರಾಜೇಶನ ಜ*ರ್ಜರಿತವಾದ ಮೃತದೇಹ ಪತ್ತೆಯಾಗಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ಮೂಡಿದೆ.

ವಿಪರ್ಯಾಸ ಅಂದರೆ ಆತನ ಪರಿಚಯವಿರುವ ಯಾರಿಗೂ ಆತನ ಕುಟುಂಬದ ಬಗ್ಗೆ ಮಾಹಿತಿ ಇಲ್ಲ. ಅವನು ಎಲ್ಲಿಯವನು ಆವನ ಸಂಬಂಧಿಗಳು ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ.

 

LEAVE A REPLY

Please enter your comment!
Please enter your name here