Home ಕರಾವಳಿ ನಾಟೆಕಲ್ : ಬಸ್ – ಕಾರು ನಡುವೆ ಅಪಘಾತ; ನಾಲ್ವರಿಗೆ ಗಾಯ

ನಾಟೆಕಲ್ : ಬಸ್ – ಕಾರು ನಡುವೆ ಅಪಘಾತ; ನಾಲ್ವರಿಗೆ ಗಾಯ

0

ನಾಟೆಕಲ್ : ಬಸ್ ಹಾಗೂ ಕಾರಿನ ನಡುವೆ  ಅಪಘಾತ ಸಂಭವಿಸಿ, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿರುವ ಘಟನೆ ಕಲ್ಕಟ್ಟ ಸಮೀಪದ ತಿರುವಿನಲ್ಲಿ ಇಂದು(ಅ.15) ಸಂಜೆ ವೇಳೆ ಸಂಭವಿಸಿದೆ.

ಆಸೀಫ್ ಕಲ್ಕಟ್ಟ ಇವರ ಬಲಗೈ, ಭುಜದ ಮೂಲೆಗಳು ಮುರಿತಕ್ಕೊಳಗಾಗಿದ್ದರೆ, ಅರಾಫತ್ ಇನೋಳಿ ಎಂಬವರ ಕಾಲಿನ ಮೂಳೆಗಳು ಮುರಿತಕ್ಕೊಳಗಾಗಿದೆ. ಉಳಿದಂತೆ ಚಾಲಕ ಅಝ್ಮಾನ್, ಹ್ಯಾರೀಸ್ ಕಲ್ಕಟ್ಟ ಗಾಯಗೊಂಡಿದ್ದಾರೆ.

ಮುಡಿಪುವಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸು ವಿರುದ್ಧ ದಿಕ್ಕಿನಿಂದ ಬಂದಿದ್ದು, ಎದುರಿನಿಂದ  ನಾಟೆಕಲ್ ನಿಂದ ಕಲ್ಕಟ್ಟ ಕಡೆಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ನಾಲ್ವರನ್ನು ಕದ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಖಾಸಗಿ ಬಸ್ಸುಗಳ ಪೈಪೋಟಿಯಿಂದ  ವಾಹನ ಸವಾರರು ಪ್ರಾಣ ತೆತ್ತಬೇಕಾಗಿದೆ. ಬಸ್ಸು ಚಾಲಕರ ವೇಗಕ್ಕೆ ಕಡಿವಾಣ ಹಾಕಬೇಕು ಹಾಗೂ ಟೈಮಿಂಗ್  ವಿಚಾರವನ್ನು ಖಾಸಗಿ ಬಸ್ ಮಾಲಕರ ಸಂಘ ಹಾಗೂ ಸಂಚಾರಿ ಪೊಲೀಸರು ಸೇರಿಕೊಂಡು ಪರಿಷ್ಕರಿಸಬೇಕು ಎಂದು ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.  ಇನ್ನೊಂದೆಡೆ ಕಲ್ಕಟ್ಟ ತಿರುವು ಪ್ರದೇಶ ಅಪಘಾತ ವಲಯ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

 

LEAVE A REPLY

Please enter your comment!
Please enter your name here