Home ತಾಜಾ ಸುದ್ದಿ ಅಪ್ರಾಪ್ತ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ;16ನೇ ವಯಸ್ಸಿನಲ್ಲೇ ದ್ವಿಚಕ್ರ ವಾಹನ ಲೈಸೆನ್ಸ್?

ಅಪ್ರಾಪ್ತ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ;16ನೇ ವಯಸ್ಸಿನಲ್ಲೇ ದ್ವಿಚಕ್ರ ವಾಹನ ಲೈಸೆನ್ಸ್?

0

ಅಪ್ರಾಪ್ತ ವಯಸ್ಸಿನವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವಾಹನ ಚಲಾವಣೆ ನಿಯಮದಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ 16 ವರ್ಷ ಪೂರ್ಣಗೊಂಡವರಿಗೂ ವಾಹನ ಚಲಾವಣೆ ಮಾಡಲು ಅವಕಾಶ ಒದಗಿಸಿ ಕೊಡಲಾಗಿದೆ.


ಅಪ್ರಾಪ್ತ ವಯಸ್ಸಿನವರಿಗೂ ದ್ವಿಚಕ್ರವಾಹನ ಚಲಾಯಿಸಲು ಅವಕಾಶ ನೀಡಲಾಗಿದ್ದು, ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವಾಹನ ಚಲಾಯಿಸಲು ಲೈಸನ್ಸ್ ಪಡೆಯಲು ಅವಕಾಶ ನೀಡಲಾಗುತ್ತದೆ. ಆದರೆ, ಈ ನಿಯಮದಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಲು ನಿರ್ಧರಿಸಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜಿಸುವ ಸಲುವಾಗಿ ಸರ್ಕಾರ ಈ ನಿರ್ಧರ ಕೈಗೊಂಡಿದೆ ಎನ್ನಲಾಗಿದೆ.

ವಾಹನ ಚಾಲನೆ ವೇಳೆ ವೇಗದ ಮಿತಿ 25 ಕಿ.ಮೀ ಸ್ಕೂಟರ್ ಸಾಮರ್ಥ್ಯ 55 ಸಿಸಿ ಮೋಟಾರ್ ಶಕ್ತಿ ಗರಿಷ್ಠ 1500 ವ್ಯಾಟ್ ಗೆ ಸೀಮಿತವಾಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಿಗದಿಪಡಿಸಿದೆ.
ಈ ನಿರ್ಧರದಿಂದ ಅಪ್ರಾಪ್ತ ವಯಸ್ಸಿನವರಿಗೆ ಸಿಹಿಸುದ್ದಿಯಂತಾಗಿದೆ. ಶಾಲಾ-ಕಾಲೇಜು ತೆರಳಲು 16 ವರ್ಷ ಮೇಲ್ಪಟ್ಟ ಹಾಗೂ 18 ವರ್ಷದೊಳಗಿನ ಯುವಕ ಯುವತಿಯರಿಗೆ ಈ ವಾಹನ ಚಲಾಯಿಸಿಬಹುದಾಗಿದೆ. ಈ ಕುರಿತು ಕಾನೂನನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ

LEAVE A REPLY

Please enter your comment!
Please enter your name here