Home ಪ್ರಖರ ವಿಶೇಷ ಮಂಗಳೂರು: ಅತ್ಯಾಚಾರ ಆರೋಪ ಪ್ರಕರಣ – ಖುಲಾಸೆ

ಮಂಗಳೂರು: ಅತ್ಯಾಚಾರ ಆರೋಪ ಪ್ರಕರಣ – ಖುಲಾಸೆ

0

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2019ರಲ್ಲಿ ಆರೋಪಿ ಚಾಲಕ ಉಮೇಶ್ ಸಾಲ್ಯಾನ್ ಯುವತಿಯೊಂದಿಗೆ ಆತ್ಮೀಯತೆಯಿಂದಿದ್ದು, ತಂದೆಯ ಶಸ್ತ್ರಚಿಕಿತ್ಸೆಗೆ 1 ಲ.ರೂ. ಪಡೆದುಕೊಂಡು ಅದನ್ನು 2 ತಿಂಗಳಲ್ಲಿ ನೀಡುವುದಾಗಿ ಹೇಳಿದ್ದ ಯುವತಿ ಆ ಹಣವನ್ನು ಕೇಳಿದಾಗ + ಕೊಡದೆ ಸತಾಯಿಸುತ್ತಿದ್ದ ನ. 20ರಂದು ಹಣ ನೀಡುವುದಾಗಿ ತನ್ನ ಮನೆಗೆ ಕರೆಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ. ಆದರೆ ಅನಂತರ ಮದುವೆಯಾಗಲು ಒಪ್ಪಿರಲಿಲ್ಲ. ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಈ ಕುರಿತು ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ಆರೋಪಿ ಉಮೇಶ್ ಸಾಲ್ಯಾನ್ ಅವರನ್ನು ಖುಲಾಸೆಗೊಳಿಸಿ ಆ. 29ರಂದು ತೀರ್ಪು ನೀಡಿದ್ದಾರೆ. ದೂರುದಾರರಿಗೆ ಅದಾಗಲೇ ಮದುವೆಯಾಗಿದ್ದು, ವಿಚ್ಚೇದನ ನೀಡಿರಲಿಲ್ಲ. ಮಾತ್ರವಲ್ಲದೆ ಈ ಹಿಂದೆ ಆಕೆ 2 ಬಾರಿ ದೂರು ನೀಡಿದ್ದು ಅದರಲ್ಲಿ ಅತ್ಯಾಚಾರದ ವಿಷಯ ಪ್ರಸ್ತಾವಿಸಿರಲಿಲ್ಲ, ಈ ಎಲ್ಲ ಅಂಶಗಳನ್ನು ಆಧರಿಸಿ ಆರೋಪಿ ಪರವಾಗಿ ತೀರ್ಪು ಪ್ರಕಟವಾಗಿದೆ. ಆರೋಪಿ ಪರ ವಕೀಲರಾದ ಬಿ. ಅರುಣ ಬಂಗೇರ ಮತ್ತು ರಿಹಾನಾ ಪರ್ವಿನ್ ವಾದಿಸಿದ್ದರು.


LEAVE A REPLY

Please enter your comment!
Please enter your name here