Home ಕರಾವಳಿ ಮಂಗಳೂರು: ಕೂಳೂರು ಸೇತುವೆಯಲ್ಲಿ ಆ. 19ರಿಂದ ಘನ ವಾಹನ ಸಂಚಾರ ನಿರ್ಬಂಧ

ಮಂಗಳೂರು: ಕೂಳೂರು ಸೇತುವೆಯಲ್ಲಿ ಆ. 19ರಿಂದ ಘನ ವಾಹನ ಸಂಚಾರ ನಿರ್ಬಂಧ

0

ಮಂಗಳೂರು: ಉಡುಪಿ – ಮಂಗಳೂರು ಸಂಪರ್ಕದ ಕೂಳೂರು ಹಳೆಯ ಕಮಾನು ಸೇತುವೆಯ ದುರಸ್ತಿ ಹಿನ್ನೆಲೆ ಬೆಳಿಗ್ಗೆ ವೇಳೆ ಘನ ವಾಹನಗಳ ಸಂಚಾರವನ್ನು ಆ. 19, ರಿಂದ 21ರವರೆಗೆ, 3 ದಿನಗಳ ಕಾಲ ನಿರ್ಬಂಧಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧಾರ ಮಾಡಿದೆ.


ಆ. 19 ರಿಂದ ಘನ ವಾಹನಗಳು ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 11ರಿಂದ ಅಪರಾಹ್ನ 3ರ ವರೆಗೆ ಮಾತ್ರ ಪಕ್ಕದಲ್ಲಿರುವ ಹೊಸ ಸೇತುವೆಯಲ್ಲಿ ಸಂಚರಿಸಬಹುದು. ಈ ಸಂದರ್ಭದಲ್ಲಿ ಹೊಸ ಸೇತುವೆಯಲ್ಲಿ ಘನ ವಾಹನಗಳು ದ್ವಿಮುಖ ಮಾರ್ಗವಾಗಿ ಸಂಚಾರಿಸುತ್ತಿರುತ್ತವೆ.

ಈ ಮೂರು ದಿನಗಳ ಕಾಲ ಬೆಳಗ್ಗೆ 6ರಿಂದ 11ರ ವರೆಗೆ ಹಾಗೂ ಅಪರಾಹ್ನ 3ರಿಂದ ರಾತ್ರಿ 10 ಗಂಟೆಯವರೆಗೆ ಉಡುಪಿಯಿಂದ ಕೇರಳ ಕಡೆಗೆ ಸಾಗುವ ಘನ ವಾಹನಗಳು ಮೂಲ್ಕಿ- ಸುರತ್ಕಲ್‌- ಎಂಆರ್‌ಪಿಎಲ್‌, ಬಜ್ಪೆ, ಕೆಪಿಟಿ, ನಂತೂರು ಮಾರ್ಗವಾಗಿ ತೆರಳಬಹುದು.

ಇನ್ನು ಈ 3 ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಿದ ನಂತರ ಅಗತ್ಯ ಮಾರ್ಪಾ ಡುಗಳಿದ್ದಲ್ಲಿ ಈ ನಿರ್ಬಂಧವನ್ನು ಆ. 25ರಿಂದ ಮುಂದಿನ ತಿಂಗಳು ಅ. 25ರ ವರೆಗೆ ಮುಂದುವರಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದ್ದಾರೆ.‌

LEAVE A REPLY

Please enter your comment!
Please enter your name here