ಮಂಗಳೂರು:ಕಾಲೇಜು ಹಾಗೂ ಖಾಸಗಿ ಬಸ್ಸುಗಳೆರಡರ ನಡುವೆ ಅಪಘಾತ ಸಂಭವಿಸಿದ ಘಟನೆ ನಾಟೆಕಲ್ ಉರುಮಣೆ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ.
ಯೆನೆಪೋಯ ಸಂಸ್ಥೆಗೆ ಸೇರಿದ ಕಾಲೇಜು ಬಸ್ ಹಾಗೂ ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ತೆರಳುತ್ತಿದ್ದ ಶಿವಶಂಕರ್ ಬಸ್ಸುಗಳ ಮಧ್ಯೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಖಾಸಗಿ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಸಣ್ಣಪುಟ್ಟ ಗಾಯಗೊಂಡಿದ್ದು, ಉಳಿದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.