Home ಕರಾವಳಿ ಉಡುಪಿ: ಪಾತ್ರ ಮುಗಿಸಿ ವೇಷ ಕಳಚುತ್ತಿರುವಾಗಲೇ ಯಕ್ಷಗಾನ‌ ಕಲಾವಿದ ಹೃದಯಾಘಾತದಿಂದ ಸಾವು!

ಉಡುಪಿ: ಪಾತ್ರ ಮುಗಿಸಿ ವೇಷ ಕಳಚುತ್ತಿರುವಾಗಲೇ ಯಕ್ಷಗಾನ‌ ಕಲಾವಿದ ಹೃದಯಾಘಾತದಿಂದ ಸಾವು!

0

ಉಡುಪಿ: ನಾಲ್ಕು ದಶಕಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಅಪರೂಪದ ಕಲಾವಿದರೊಬ್ಬರು, ಯಕ್ಷಗಾನ ಪ್ರಸಂಗದಲ್ಲಿ ತನ್ನ ಕೊನೆಯ ಪಾತ್ರ ನಿರ್ವಹಣೆ ಮುಗಿಸಿ ಕೊನೆಯುಸಿರೆಳೆದ ಅಪರೂಪದ ವಿದ್ಯಮಾನ ಉಡುಪಿಯಲ್ಲಿ ಸಂಭವಿಸಿದೆ.

ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಿರ್ವಹಿಸಿದ ಹಿರಿಯ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು (64 ವರ್ಷ) ನಿಧನರಾದವರು. ನಿನ್ನೆ (ಮೇ 1) ಕೋಟ ಗಾಂಧಿ ಮೈದಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿದ್ದ ಹಾಗೆ ರಾತ್ರಿ ಸುಮಾರು 12.25ಕ್ಕೆ ಚೌಕಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು‌. ಅವರು ಯಾವುದೇ ಪಾತ್ರ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತಿದ್ದ ಹಿರಿಯ ಸವ್ಯಸಾಚಿ ಕಲಾವಿದರಾಗಿದ್ದರು. ಚೌಕಿಯಿಂದಲೇ ನಿರ್ಗಮಿಸಿದ ಹಿರಿಯ ಪುಣ್ಯಾತ್ಮರ ಸಾಲಿಗೆ ಗಂಗಾಧರರೂ ಸೇರಿದಂತಾಗಿದೆ. ಪ್ರಸಂಗದ ಕೊನೆಯ ದೃಶ್ಯದ ಮೊದಲಿನ ಭಾಗದಲ್ಲಿ ಇವರ ಪಾತ್ರ ನಿರ್ವಹಣೆ ಇತ್ತು. ನಿರ್ವಹಣೆ ಮುಗಿಸಿ ವೇಷ ಕಳಚುತಿದ್ದಂತೆ ಹೃದಯಾಘಾತ ಸಂಭವಿಸಿರುವುದು ಅಚ್ಚರಿಯನಿಸಿದೆ.

LEAVE A REPLY

Please enter your comment!
Please enter your name here