Home ಕರಾವಳಿ ಕಾಲೇಜಿಗೆ ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ – ಮದುವೆಯಾಗಿ ಪತ್ತೆ.!

ಕಾಲೇಜಿಗೆ ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ – ಮದುವೆಯಾಗಿ ಪತ್ತೆ.!

0

ಮೂಡುಬಿದಿರೆ : ಕಾಲೇಜೊಂದರ ಪ್ರಥಮ ವರ್ಷದ ಬಿಪಿಟಿ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬೈಂದೂರು ತಾಲೂಕಿನ ಕೊಲ್ಲೂರಿನ ಆದಿರಾ (19) ಕಾಣೆಯಾದ ವಿದ್ಯಾರ್ಥಿನಿ.

ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಈಕೆ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಹಪಾಠಿಗಳ ಜತೆ ಕಾಲೇಜಿಗೆ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಬಂದು ಕನ್ನಡ ಭವನದ ಬಳಿ ಇಳಿದಿರುವ ಮಾಹಿತಿ ಇದ್ದು ಅನಂತರ ಅಲ್ಲಿಂದ ಕಾಲೇಜಿಗೆ ಹೋಗದೆ ಕಾಣೆಯಾಗಿರುವುದಾಗಿ ತಿಳಿದುಬಂದಿದ್ದು, ಸದ್ಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ, ವಿದ್ಯಾರ್ಥಿನಿ ತನ್ನ ಪ್ರಿಯಕರನ ಜೊತೆ ಮದುವೆಯಾಗಿದ್ದಾಳೆ ಎನ್ನಲಾಗಿದೆ.ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಆದಿರಾ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ಫೆ.23 ರಂದು ಬೆಳಿಗ್ಗೆ ಕಾಲೇಜಿನ ಬಸ್ಸಲ್ಲಿ ಬಂದಿದ್ದ ಆಕೆ ಕನ್ನಡ ಭವನ ಬಳಿ ಇಳಿದು ಹೋದಾಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಹೆತ್ತವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದರು. ಇದೀಗ ಆಕೆ ತನ್ನ ಪ್ರಿಯಕರನೊಂದಿಗೆ ಕೇರಳದಲ್ಲಿ ಮದುವೆಯಾಗಿರುವುದಾಗಿ ತಿಳಿದು ಬಂದಿದೆ. ತನ್ನದೇ ಊರಿನ ಯುವಕನನ್ನು ಪ್ರೀತಿಸುತ್ತಿದ್ದ ಆಕೆ ಆತನನ್ನೇ ಮದುವೆಯಾಗಿದ್ದಾಳೆಂದು ತಿಳಿದು ಬಂದಿದ್ದು ಮೂಡುಬಿದಿರೆ ಠಾಣೆಗೆ ಹಾಜರಾಗುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here