Home ಕರಾವಳಿ ಕಾಂಗ್ರೆಸ್ ಆಡಳಿತದಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗುವುದು ಶಿಕ್ಷಾರ್ಹ ಅಪರಾಧವೇ..?

ಕಾಂಗ್ರೆಸ್ ಆಡಳಿತದಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗುವುದು ಶಿಕ್ಷಾರ್ಹ ಅಪರಾಧವೇ..?

0

ಮಂಗಳೂರು: ವೆಲೆನ್ಸಿಯಾ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ಧರ್ಮ, ದೇವರ ಅವಹೇಳನ ಮಾಡಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದ ಮಂಗಳೂರಿನ ಇಬ್ಬರು ಶಾಸಕರು, ಇಬ್ಬರು ಕಾರ್ಪೊರೇಟರ್‌ಗಳು, ಹಿಂದೂ ಮುಖಂಡರ ಮೇಲೆ ಕೇಸು ದಾಖಲಿಸಲಾಗಿದ್ದು , ಅಧಿಕಾರವನ್ನು ದುರ್ಬಳಕೆ ಮಾಡಿ ನಮ್ಮ ಶಾಸಕರಾದ ಡಾ. ಭರತ್ ಶೆಟ್ಟಿ ಮತ್ತು ವೇದವ್ಯಾಸ್ ಕಾಮತ್, ಮ.ನ.ಪಾ ಸದಸ್ಯರಾದ ಭರತ್ ಕುಮಾರ್ ಮತ್ತು ಸಂದೀಪ್ ಗರೋಡಿ, ಶರಣ್ ಪಂಪ್ವೆಲ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದೆ” ಇದನ್ನು ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ.

“ಒಬ್ಬ ಶಾಸಕ ತನ್ನ ಮತದಾರರ ಧ್ವನಿಯಾಗುವ ಕನಿಷ್ಠ ಹಕ್ಕು ಕೂಡ ಇಲ್ಲವೇ..? ತನ್ನ ಕ್ಷೇತ್ರದ ಮತದಾರರ ಧರ್ಮವನ್ನು ಆಚರಿಸುವ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ಬಂದಾಗ ಅದರ ಪರವಾಗಿ ನಿಲ್ಲುವುದು ಅಪರಾಧವೇ..? ಹಾಡಹಗಲೇ ನಡೆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಜನಪ್ರತಿನಿಧಿಗಳಿಗೆ ಕಾಂಗ್ರೆಸ್ ಆಡಳಿತದಲ್ಲಿ ಸಿಕ್ಕ ಗೌರವ ಇದುವೇ ?” ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here