Home ಕರಾವಳಿ ಸುಳ್ಯ: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ..!

ಸುಳ್ಯ: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ..!

0

ಸುಳ್ಯ ಸಮೀಪದ ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಎಂಬಾತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಎಂದು ಗುರುತಿಸಲಾಗಿದೆ.

ಮೂಲತಃ ಚೊಕ್ಕಾಡಿಯವರಾಗಿರುವ, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ ಶಮಂತ್ ಇಂದು ಬೆಳಿಗ್ಗೆ6 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಬಂದು ಶಾಲಾ ಆವರಣದ ಶೌಚಾಲಯದ ಹಿಂಬದಿ ಗಿಡವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳೀಯರು ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈತ ಕಳೆದ ವರ್ಷ ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರವಾಗಿದ್ದ ಈತ ಸಾವಿನ ದವಡೆಯಿಂದ ಪಾರಾಗಿದ್ದ. ಈತನ ಚಿಕಿತ್ಸೆಗಾಗಿ ನೂರಾರು ದಾನಿಗಳು ಹಣಕಾಸು ನೆರವು ನೀಡಿದ್ದರು.

LEAVE A REPLY

Please enter your comment!
Please enter your name here