ಮಂಗಳೂರು: ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ, ಬೆಂದೂರ್‌ವೆಲ್, ಪಣಂಬೂರು 1,000 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯನ್ನು ನಾಗೂರಿ ಮಾರುಕಟ್ಟೆ ಬಳಿ ಬಲಪಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಡಿ.6 ರಿಂದ 8 ರವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ತುಂಬೆ ರಾಮಲ್ ಕಟ್ಟೆ ಬಳಿ ಕೆಯುಐಡಿಎಫ್‌ಸಿ ವತಿಯಿಂದ ಬಲ್ಕ್ ಫೋ ಮೀಟರ್ ಅಳವಡಿಕೆ ಕಾಮಗಾರಿ ಹಾಗೂ ಮನಪಾ ವತಿಯಿಂದ 900 ಎಂ.ಎಂ ವ್ಯಾಸದ ಕೊಳವೆಯನ್ನು ಕೆ ಐಒಸಿಎಲ್ ಎದುರುಗಡೆ ಬದಲಾಯಿಸುವ ಕಾಮಗಾರಿ ಡಿ.6ರಿಂದ ಆರಂಭವಾಗಲಿದೆ. ಡಿ.6ರಂದು ಬೆಳಗ್ಗೆ 6ರಿಂದ ಡಿ.8ರ ಬೆಳಗ್ಗೆ 6ವರೆಗಿನ ಅವಧಿಯಲ್ಲಿ ಬೆಂದೂರ್ ವೆಲ್ ಲೋ ಲೇವೆಲ್ ಪ್ರದೇಶಗಳಾದ ಪಿ.ವಿ.ಎಸ್, ಲೇಡಿಹಿಲ್, ಬಂದರ್ ಹಾಗೂ ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲಬೈಲ್, ಕದ್ರಿ, ನಾಗೂರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ ಕಾನ, ಬಾಳ, ಕುಳಾಯಿ, ಮುಕ್ತ, ಪಣಂಬೂರು ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದರಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಹಾನಗರ ಪಾಲಿಕೆ ಪ್ರಕಟನೆ ತಿಳಿಸಿದೆ.