Home ಕರಾವಳಿ ಸೇವಾ ಸೌರಭ ಟ್ರಸ್ಟ್ ಸದಸ್ಯರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

ಸೇವಾ ಸೌರಭ ಟ್ರಸ್ಟ್ ಸದಸ್ಯರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

0

ಪುತ್ತೂರು: ನ ,13  ರಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ವಸ್ತ್ರ ವಿತರಣಾ ಹಾಗೂ ಸಜಭೋಜನ ಕಾರ್ಯಕ್ರಮ ಯಸಶ್ವಿಯಾಗಲು ಟ್ರಸ್ಟಿನ ಸದಸ್ಯರು ಹಾಗೂ ಕಾರ್ಯಕರ್ತರ ಶ್ರಮ ಮತ್ತು ಎಲ್ಲರ ಸಹಕಾರದಿಂದ ಅಭೂತಪೂರ್ವ ಯಶಸ್ಸುಕಂಡಿದೆ ಎಂದು ಟ್ರಸ್ಟಿನ ಅಧ್ಯಕ್ಷರೂ ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.


ಕಾರ್ಯಕ್ರಮದ ಯಶಸ್ಸಿಗೆ ಕಳೆದ ಒಂದು ತಿಂಗಳಿಂದ ಟ್ರಸ್ಟಿನ ಸದಸ್ಯರು ಮತ್ತು ಪದಾಧಿಕಾರಿಗಳು ಪ್ರತೀ ಗ್ರಾಮಗಳಿಗೆ ತೆರಳಿ ಪ್ರಚಾರ ಮತ್ತು ಆಮಂತ್ರ ನೀಡುವ ಕಾರ್ಯವನ್ನು ಮಾಡಿದ್ದರು. ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಆಮಂತ್ರಣವನ್ನು ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನ ಮಾಡಲಾಗಿದ್ದು ನಮ್ಮ ಮೇಲೆ ಅಬಿಮಾನವಿಟ್ಟು ಸಹಸ್ರ ಸಂಖ್ಯೆಯಲ್ಲಿ ಕ್ಷೆತ್ರದ ಹಾಗೂ ಕ್ಷೇತ್ರದ ಹೊರಗಿನ ನಾಗರಿಕ ಬಂಧುಗಳು ಆಗಮಿಸಿ ನಮಗೆ ಆಶೀರ್ವಾದ ಮಾಡಿದ್ದಾರೆ, ಅನ್ನದಾನವನ್ನು ವಸ್ತ್ರದಾನವನ್ನು ಸ್ವೀಕರಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿ ಹಾರೈಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಶಾಸಕರು ಹೇಳಿದರು.

ಟ್ರಸ್ಟಿನ ಪ್ರತಿನಿಧಿಗಳು ಆಹೋರಾತ್ರಿ ಅಚ್ಚುಕಟ್ಟಾಗಿ ಕೆಲಸ ಮಾಡಿದ ಪರಿಣಾಮ ಯಾವುದೇ ಅಡೆತಡೆಯಿಲ್ಲದೆ ಕಾರ್ಯಕ್ರಮ ಅತ್ಯಂತ ಸುಸೂತ್ರವಾಗಿ ನಡೆದಿದೆ. ನಮ್ಮ ನಿರಿಕ್ಷೆಗೂ ಮೀರಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದ ಶಾಸಕರು ಕಾರ್ಯಕ್ರಮ ಆಯೋಜನೆ ಮಾಡಲು ರಚನೆ ಮಾಡಿರುವ ವಿವಿಧ ಸಮಿತಿಯ ಎಲ್ಲಾ ಪ್ದಾಧಿಕಾರಿಗಳಿಗೂ ಸದಸ್ಯರಿಗೂ ಅಭಿನಂದನೆಯನ್ನು ಸಲ್ಲಿಸಿದರು.

ಮುಂದಿನ ಬಾರಿ ಅದ್ದೂರಿಯಾಗಿ ದೀಪಾವಳಿ

ಮುಂದಿನ ಬಾರಿ ಎಲ್ಲರ ಸಹಕಾರದಿಂದ ಅದ್ದೂರಿಯಾಗಿ ದೀಪಾವಳಿ ಆಚರಣೆಯನ್ನು ಮಾಡಬೇಕಿದೆ. ಈ ಬಾರಿಗಿಂತ ಹೆಚ್ಚಿನ ಮಂದಿಗೆ ಆಹ್ವಾನವನ್ನು ನೀಡುವ ಮೂಲಕ ಸುಮಾರು ೧೫೦೦೦೦ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನಾವೆಲ್ಲರೂ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವ ಯೋಜನೆಯನ್ನು ಹಾಕಿಕೊಳ್ಳಲಿದ್ದೇವೆ ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು.

ಸ್ಪೀಕರ್ ಗೂ ಅಚ್ಚರಿಯಾಗಿತ್ತು

ಕಾರ್ಯಕ್ರಮದಲ್ಲಿಭಾಗವಹಿಸಿದ್ದ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ರವರು ಕಾರ್ಯಕ್ರಮದಿಂದ ತೆರಳಿದ ಬಳಿಕ ಮೊಬೈಲ್ ಕರೆ ಮಾಡಿ ಇಷ್ಟೊಂದು ಜನ ಸೇರುವ ಕಾರ್ಯಕ್ರಮವಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ಈ ಕಾರ್ಯಕ್ರಮಕ್ಕೆ ಸೀಎಂ ಅವರನ್ನೇ ಕರೆಸಬೇಕಿತ್ತು. ಅಷ್ಟು ಜನ ಸೇರಿದ್ದರೂ ಎಲ್ಲವೂ ಅಚ್ಚುಕಟ್ಟಾಗಿ ನಡೆದಿರುವುದು ಅದ್ಬುತವಾಗಿದೆ ಎಂದು ನನಗೆ ಹೇಳಿದ್ದರು ಎಂದು ಶಾಸಕರು ಸಭೆಗೆ ತಿಳಿಸಿದರು.ಡಿಸಿಸಿ ಅಧ್ಯಕ್ಷ ರಾದ ಹರೀಶ್ ಕುಮಾರ್ ರವರು ಕೂಡಾ ಕರೆ ಮಾಡಿ ಬಡವರಿಗೆ ಸನ್ಮಾನ ಮಾಡಿರುವುದು ಉತ್ತಮ ಕೆಲಸವಾಗಿದೆ. ಈ ರೀತಿಯ ಕಾರ್ಯಕ್ರಮ ರಾಜ್ಯದಲ್ಲಿ ಎಲ್ಲಿಯೂ ನಡೆಯುವುದಿಲ್ಲ. ರೈ ಟ್ರಸ್ಟ್ ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಬಂದಿದ್ದೇನೆ ಅಚ್ಚರಿಯಾಗಿದೆ ಎಂದು ಹೇಳಿ ಅಭಿನಂದಿಸಿದ್ದಾರೆ ಎಂದು ಶಾಸಕರು ಸಭೆಯಲ್ಲಿಮೆಲುಕು ಹಾಕಿದರು.

ಜನತೆ ಸಂತೋಷವೇ ನಮ್ಮ ಸಂತೋಷ: ಸುಮಾ ಅಶೋಕ್ ರೈ

ಟ್ರಸ್ಟಿನ ಮುಖ್ಯಸ್ಥರಾದ ಸುಮಾ ಅಶೋಕ್ ರೈ ಮಾತನಾಡಿ ಸೇವಾ ಸೌರಭ ವಸ್ತ್ರ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ನಾಗರಿಕ ಬಂಧುಗಳು ಆಗಮಿಸಿದ್ದಾರೆ. ಅವರು ಸಂತೋಷದಿಂದ ನಮ್ಮ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಾರೆ ಅವರ ಸಂತೋಷವೇ ನಮ್ಮ ಸಂತೋಷವಾಗಿದೆ ಎಂದು ಹೇಳಿದರು. ಸುಮಾರು ೬೫ ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಯಾವುದೇ ಗೊಂದಲವಾಗಲಿಲ್ಲ. ಟ್ರಸ್ಟಿನ ಕಾರ್ಯಕ್ರಮ ನಮ್ಮ ಕಾರ್ಯಕ್ರಮ ಎಂಬಂಥೆ ಜನತೆ ಸ್ವೀಕರಿಸಿದ್ದಾರೆ ಇದಕ್ಕಿಂತ ದೊಡ್ಡ ಆಶೀರ್ವಾದ ಇನ್ನೊಂದಿಲ್ಲ. ಮುಂದಿನ ದಿನಗಳಲ್ಲಿ ಟ್ರಸ್ಟಿನ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಗಳು ನಡೆಯಲಿದೆ. ಜನತೆಯ ಹಿತಕ್ಕೋಸ್ಕರವೇ ರೈ ಚಾರಿಟೇಬಲ್ ಟ್ರಸ್ಟ್ ಕೆಲಸ ಮಾಡಲಿದೆ. ನೊಂದವರ ಕಣ್ಣೀರೊರೆಸುವ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಲಿದ್ದೇವೆ, ಮುಂದಿನ ದಿನಗಳಲ್ಲಿ ಜನತೆಯ ಸಹಕಾರವನ್ನು ನಾವು ಬಯಸುತ್ತೇವೆ ಎಂದು ಹೇಳಿ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಟ್ರಸ್ಟಿನ ಪ್ರಮುಖರಾದ ನಿಹಾಲ್ ಶೆಟ್ಟಿ ಕಲ್ಲಾರೆ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ವಿವಿಧ ಸಮಿತಿಯ ಪದಾಧಿಕಾರಿಗಳಿಗೆ, ಸದಸ್ಯರಿಗೆ, ಟ್ರಸ್ಟಿನ ಸದಸ್ಯರಿಗೆ, ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತಾ ಪತ್ರವನ್ನು ವಾಚಿಸಿದರು.

ವೇದಿಕೆಯಲ್ಲಿ ಟ್ರಸ್ಟಿಗಳಾದ ನಿರಂಜನ್ ರೈ ಮಠಂತಬೆಟ್ಟು, ಸೀತಾರಾಮ ಶೆಟ್ಟಿ ಹೆಗ್ಗಡೆ ಹಿತ್ಲು ಉಪಸ್ತಿತರಿದ್ದರು. ಟ್ರಸ್ಟಿನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಬಾಲಕೃಷ್ಣ ರೈ ವಂದಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯರು, ಪದಾಧಿಕಾರಿಗಳು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here