Home ಕರಾವಳಿ ಪುತ್ತೂರು : Pixel Creatives ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ ನಿಧನ

ಪುತ್ತೂರು : Pixel Creatives ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ ನಿಧನ

0

ಪುತ್ತೂರು : Pixel Creatives ಸಂಸ್ಥೆಯ ಸಹ ಮಾಲಕರಾದ ಪ್ರಶಾಂತ್ ಪಲ್ಲತ್ತಡ್ಕ (32) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.ಸಮಾರಂಭಗಳಿಗೆ ಎಲ್ಇಡಿಗಳನ್ನು ಅಳವಡಿಸುವ Pixel Creatives ಮೂಲಕ ಖ್ಯಾತರಾಗಿದ್ದ ಪ್ರಶಾಂತ್ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು. ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪುತ್ತೂರು, ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಮಾರಂಭಕ್ಕೆ ಎಲ್ಇಡಿ ಹಾಗೂ ನೇರಪ್ರಸಾರಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಖ್ಯಾತ ಸಂಸ್ಥೆ ಇದಾಗಿದೆ. ಮೃತರು ಪತ್ನಿ, ತಂದೆ ತಾಯಿ ಅಕ್ಕಂದಿರು, ಸಿಬ್ಬಂದಿ ವರ್ಗ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here