ಮಂಗಳೂರು: ಮೀನುಗಾರಿಕೆಗೆಂದು ತೆರಳಿದ್ದ ಆಂಧ್ರ ಪ್ರದೇಶ ಮೂಲದ ಕಾರ್ಮಿಕ ಮೈಲಾಪಿಳ್ಳೆ ನಲಂನಾಯ್ಡು (43) ನಾಪತ್ತೆಯಾಗಿದ್ದಾರೆ. ಉಳ್ಳಾಲ ಕೋಟೆಪುರದಲ್ಲಿ ವಾಸ ವಾಗಿದ್ದ ಅವರು ಸೆ. 23ರಂದು ಅಪರಾಹ್ನ 3 ಗಂಟೆಗೆ ಮಂಗಳೂರು ದಕ್ಷಿಣ ದಕ್ಕೆಯಿಂದ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆಗ ಕಾಲು ಜಾರಿ ನೀರಿಗೆ ಬಿದ್ದಿದ್ದು ಉಳಿದ ಕೆಲಸಗಾರರು ನೀರಿಗೆ ಹಾರಿ ಹುಡುಕಾಟ ನಡೆಸಿದರು. ಅನಂತರ ಅಗ್ನಿಶಾಮಕ ದಳದವರು ಹುಡುಕಾಡಿದರೂ ಪ್ರಯೋಜನವಾಗಿಲ್ಲ. 5 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು ಬಿಳಿ ಮತ್ತು ನೀಲಿಬಣ್ಣದ ಅಂಗಿ, ಕಪ್ಪು ಬಣ್ಣದ ಬರ್ಮುಡ ಧರಿಸಿದ್ದರು. ತೆಲುಗು ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ(0824-2220518) ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.