Home ತಾಜಾ ಸುದ್ದಿ ಕರ್ನಾಟಕ ಬಂದ್ ಮಾಡಿದರೆ ಕಾನೂನು ಕ್ರಮ : ಸಂಘಟನೆಗಳಿಗೆ ಎಚ್ಚರಿಕೆ ಕೊಟ್ಟ ಗೃಹ ಸಚಿವ ಜಿ...

ಕರ್ನಾಟಕ ಬಂದ್ ಮಾಡಿದರೆ ಕಾನೂನು ಕ್ರಮ : ಸಂಘಟನೆಗಳಿಗೆ ಎಚ್ಚರಿಕೆ ಕೊಟ್ಟ ಗೃಹ ಸಚಿವ ಜಿ ಪರಮೇಶ್ವರ್

0

ಬೆಂಗಳೂರು :ನಾಳೆ ಕಾವೇರಿ ನೀರು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ. ಈ ಬಗ್ಗೆ ್ಮಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ, “ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು.ಅದಕ್ಕೆ ಅಭ್ಯಂತರವಿಲ್ಲ.ಆದರೆ ಬಂದ್ ಮಾಡುವುದಕ್ಕೆ ಅವಕಾಶವಿಲ್ಲ.ಸುಪ್ರೀಂ ಕೋರ್ಟ್ ಕೂಡ ಬಂದ್ ಮಾಡುವಂತಿಲ್ಲ ಎಂದು ಹೇಳಿದೆ.ಇದನ್ನು ಮೀರಿಯೂ ಬಂದ್ ಮಾಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ.ಪೋಲಿಸರಿಗೂ ಸೂಚನೆ ಕೊಟ್ಟಿದ್ದೇನೆ” ಎಂದು ಎಚ್ಚರಿಕೆ ನೀಡಿದರು.


 

“ಸೆ.26 ರಂದು ಬೆಂಗಳೂರು ಬಂದ್ ಮಾಡಿ 1500 ರಿಂದ 2000 ಕೋಟಿ ರೂ. ನಷ್ಟ ಆಗಿದೆ. ಈಗ ಮತ್ತೆ ಬಂದ್ ಮಾಡಿದರೆ ಆರ್ಥಿಕ ಸಮಸ್ಯೆ ಆಗಲಿದೆ. ಮೊದಲೇ ಮಳೆ ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಇದರ ನಡುವೆ ಬಂದ್ ಮಾಡಿದರೇ ಇನ್ನಷ್ಟು ಸಮಸ್ಯೆ ಆಗಲಿದೆ. ಇದನ್ನೆಲ್ಲ ಸಂಘಟನೆಯವರು ತಿಳಿದುಕೊಳ್ಳಬೇಕು. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ಪ್ರತಿಭಟನೆ ಮಾಡಲಿ. ಆದರೆ ಬಂದ್ ಮಾಡಿದರೇ ಕಾನೂನು ಕ್ರಮ ಆಗಲಿದೆ” ಎಂದು ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here