ಮಂಗಳೂರು: ನಗರದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಆಗಮಿಸಿದ ಐವರು ಪ್ರಯಾಣಿಕರನ್ನು ತಪಾಸಣೆ ನಡೆಸಿ ಅಕ್ರಮ ಸಾಗಾಟದ 46.52 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಮಂಗಳೂರಿಗೆ ವಿವಿಧ ವಿಮಾನಗಳಲ್ಲಿ (IX814, IX384, 6E1163) ಆಗಮಿಸುತ್ತಿದ್ದ ಐವರು ಪ್ರಯಾಣಿಕರನ್ನು ಗ್ರೀನ್ ಕ್ರಾಸ್, ಸ್ಕ್ಯಾನಿಂಗ್, ಟ್ರಾಲಿ ಬ್ಯಾಗ್‌ಗಳ ತಪಾಸಣೆ ಮಾಡಲಾಗಿತ್ತು. ಈ ವೇಳೆ ಅವರಲ್ಲಿ ಅಕ್ರಮ ಸಾಗಾಟದ ಚಿನ್ನ ಪತ್ತೆಯಾಗಿದೆ. ಈ ಪ್ರಯಾಣಿಕರು ವೆಸ್ಟ್ ಮತ್ತು ಒಳ ಉಡುಪುಗಳ ಪದರಗಳ ನಡುವೆ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟು, ಏರ್ ಪಾಡ್‌ಗಳಲ್ಲಿ ಬಚ್ಚಿಟ್ಟು, ಟ್ರಾಲಿ ಬ್ಯಾಗ್‌ಗಳ ಬೀಡಿಂಗ್ ರಾಡ್‌ಗಳ ನಡುವೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿದ್ದರು. ತಕ್ಷಣ ಚಿನ್ನ ಸಹಿತ ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರಿಂದ 24 ಕ್ಯಾರೆಟ್ ನ 775 ಗ್ರಾಂ ತೂಕದ 46,52,270 ರೂ. ಮೌಲ್ಯದ ಚಿನ್ನವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗಿದೆ.