Home ಕರಾವಳಿ ಮದುವೆ ಸಮಾರಂಭದಲ್ಲಿ ಅಗ್ನಿ ಅವಘಡ: ವಧು-ವರ ಸೇರಿ 100ಕ್ಕೂ ಹೆಚ್ಚು ಜನರು ಸಾವು..!

ಮದುವೆ ಸಮಾರಂಭದಲ್ಲಿ ಅಗ್ನಿ ಅವಘಡ: ವಧು-ವರ ಸೇರಿ 100ಕ್ಕೂ ಹೆಚ್ಚು ಜನರು ಸಾವು..!

0

ಬಾಗ್ದಾದ್: ಮದುವೆ ಸಮಾರಂಭದಲ್ಲಿ ಏಕಾಏಕಿ ಬೆಂಕಿ ಹೊತ್ತಿ ಉರಿದ ಪರಿಣಾಮ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಇರಾಕ್‌ನ ನಿನೆವೆ ಪ್ರಾಂತ್ಯದ ಹಮ್ದನಿಯಾ ಜಿಲ್ಲೆಯಲ್ಲಿ ನಡೆದಿದೆ. ಹಮ್ದನಿಯಾ ಜಿಲ್ಲೆಯ ಮೊಸುಲ್ ನಗರದ ಹೊರಗೆ ನಿನ್ನೆ (ಮಂಗಳವಾರ) ರಾತ್ರಿ 10:45 ಗಂಟೆ ಸುಮಾರಿಗೆ ಮದುವೆ ಸಮಾರಂಭದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 113 ಜನರು ಮೃತಪಟ್ಟರೇ, 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮದುವೆಯಲ್ಲಿ ಸುಮಾರು 1000 ಸಾವಿರ ಜನರು ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸಿದ್ದರಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿಯನ್ನು ನಂದಿಡುವ ಕಾರ್ಯದಲ್ಲಿ ತೊಡಗಿದ್ದರು. ಬೆಂಕಿಯನ್ನು ಹತೋಟಿಗೆ ತಂದಿದ್ದು ಕಟ್ಟಡದ ಒಳಗಿನ ಎಲ್ಲ ವಸ್ತುಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ ಎನ್ನಲಾಗಿದೆ.


LEAVE A REPLY

Please enter your comment!
Please enter your name here