Home ಕರಾವಳಿ 19ನೇ ವರ್ಷದ ಈಶ್ವರಮಂಗಲ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ನಡೆಸುವ ಸಲುವಾಗಿ ಪೂರ್ವಭಾವಿ ಸಭೆ

19ನೇ ವರ್ಷದ ಈಶ್ವರಮಂಗಲ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ನಡೆಸುವ ಸಲುವಾಗಿ ಪೂರ್ವಭಾವಿ ಸಭೆ

0

ಈಶ್ವರಮಂಗಲ : 19ನೇ ವರ್ಷದ ಈಶ್ವರಮಂಗಲ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ನಡೆಸುವ ಸಲುವಾಗಿ ಹಿಂದೂ ಜಾಗರಣ ವೇದಿಕೆ ಮತ್ತು ಅರವಿಂದ ಆಟೋ ವರ್ಕ್ಸ್ ಇದರ ವತಿಯಿಂದ ಪೂರ್ವಭಾವಿ ಸಭೆ ಪಂಚಲಿಂಗೇಶ್ವರ ಸಬಾಭವನದಲ್ಲಿ ನಡೆಯಿತು. ಸಭೆಯಲ್ಲಿ ಈ ವರ್ಷದ ಆಯುಧ ಪೂಜ ಸೇವಾ ಸಮಿತಿಯನ್ನು ರಚಿಸಲಾಯಿತು.


ಈಶ್ವರಮಂಗಲ ಆಯುಧ ಪೂಜಾ ಸಮಿತಿ 2023ರ ಸಾಲಿನ ಗೌರವಾಧ್ಯಕ್ಷರು : ಡಾ. ಎಂ.ಕೆ .ಪ್ರಸಾದ್ ಖ್ಯಾತ ವೈದ್ಯರು ಆದರ್ಶ ಆಸ್ಪತ್ರೆ ಈಶ್ವರಮಂಗಲ.

ಅಧ್ಯಕ್ಷರು : ಅಚ್ಚುತ ಮಣಿಯಾಣಿ, ನಿವೃತ್ತ ಶಿಕ್ಷಕರು.

ಪ್ರಧಾನ ಕಾರ್ಯದರ್ಶಿ : ದೀಪಕ್ ಕುಮಾರ್ ಮುಂಡ್ಯ.

ಉಪಾಧ್ಯಕ್ಷರು : ಅಣ್ಣಯ್ಯ ಗೌಡ ಉರಿಕ್ಕಾಡಿ, ನಾರಾಯಣ ರೈ ಬೆಡಿಗದ್ದೆ, ಹರೀಶ್ ರಾವ್ ಪುಳಿತ್ತಡಿ,

ರಾಜೇಶ್ ರೈ ಮದಕ, ಜಯಂತ ರೈ ಮೇನಾಲ,

ಕಾರ್ಯದರ್ಶಿಗಳಾಗಿ : ರಾಜೇಂದ್ರ ಪ್ರಸಾದ್ ರೈ ಮೇನಾಲ, ಮೋನಪ್ಪ ರೈ ಕನ್ನಟಿಮಾರು, ಜಯಾನಂದ ಕೊರಿಗದ್ದೆ

ಖಜಾಂಜಿ : ರಾಜೇಶ್ ಪಂಚೋಡಿ, ಪ್ರಜ್ವಲ್ ಮಡ್ಯಲಮಜಲು, ಅವರನ್ನು ಆಯ್ಕೆ ಮಾಡಲಾಯಿತು.

22.10.2023 ಆದಿತ್ಯವಾರ ದಂದು ಬೆಳಿಗ್ಗೆ ಅರವಿಂದ ಅಟೋ ವರ್ಕ್ಸ್ ನಲ್ಲಿ ಗಣಹೋಮ, ಸಂಜೆ ಭಜನೆ, ವಾಹನಗಳಿಗೆ ಪೂಜೆ, ಬಳಿಕ ಆಯುಧ ಪೂಜೆ,ಸಭಾ ಕಾರ್ಯಕ್ರಮ ಗುರು ವಂದನೆ, ಸನ್ಮಾನ, ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳು ಭಕ್ತಿ ಪ್ರಧಾನ ನಾಟಕ ನಡೆಸುವುದೆಂದು ಸಭೆಯಲ್ಲಿ ನಿಶ್ಚಯಿಸಲಾಯಿತು.ಪೂರ್ವಭಾವಿ ಸಭೆಯಲ್ಲಿ ಊರಿನ ವಿವಿಧ ಸಂಘಟನೆಯ ,ಪ್ರಮುಖರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.

ಗೌರೀಶ್ ಈಶ್ವರಮಂಗಲ ಸ್ವಾಗತಿಸಿ, ಚಿನ್ಮಯ್ ನಡುಬೈಲ್ ವರು ಕಾರ್ಯಕ್ರಮದ ಉದ್ದೇಶ ವಿವರಿಸಿದರು. ರಾಜೇಶ್ ಪಂಚೋಡಿ ಕಾರ್ಯಕ್ರಮಗಳ ನಿರ್ವಹಿಸಿದರು.

LEAVE A REPLY

Please enter your comment!
Please enter your name here