Home ಕರಾವಳಿ ಗಣೇಶೋತ್ಸವ ಆಚರಣೆಯಿಂದ ‌ಉಳಿದ ಹಣದಲ್ಲಿ ರೂ 50 ಸಾವಿರ ಆರ್ಥಿಕ ನೆರವು

ಗಣೇಶೋತ್ಸವ ಆಚರಣೆಯಿಂದ ‌ಉಳಿದ ಹಣದಲ್ಲಿ ರೂ 50 ಸಾವಿರ ಆರ್ಥಿಕ ನೆರವು

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಿ. ಬಸ್ಟ್ಯಾಂಡ್ ಕಾರ್ಕಳ ಇದರ ವಾರ್ಷಿಕ ಲೆಕ್ಕಪತ್ರ ಸಭೆಯು ಸ್ಥಾಪಕಾದ್ಯಕ್ಷ ಶುಭದರಾವ್ ಇವರ ಅಧ್ಯಕ್ಷತೆಯಲ್ಲಿ ರಾಧಾಕೃಷ್ಣ ಸಭಾಭವನದಲ್ಲಿ ನಡೆಯಿತು, ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇವರ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ಭಕ್ತರು ದೇಣಗೆಯನ್ನು ನೀಡುತ್ತಾರೆ ಹಾಗೆ ನೀಡಿದ ಹಣದ ಸದ್ಬಳಕೆ ಮಾಡುವುದು ನಮ್ಮ ಕರ್ತವ್ಯವಾಗುತ್ತದೆ ಆ ಕಾರಣಕ್ಕಾಗಿ ಪ್ರತಿ ವರ್ಷ ಗಣೇಶೋತ್ಸವದ ಅಚರಣೆಯಿಂದ ಉಳಿದ ಹಣದಲ್ಲಿ ವೈದ್ಯಕೀಯ ಮತ್ತು ಶೈಕ್ಷಣಿಕ ನೆರವು ನೀಡುತ್ತಾ ಬಂದಿದ್ದೇವೆ ಅಂತಯೇ ಈ ವರ್ಷವೂ ರೂ 50 ಸಾವಿರವನ್ನು ನೆರವಿನ ರೂಪದಲ್ಲಿ ನೀಡಲಾಗುವುದು ಎಂದರು, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ರಾಹ್ಮಣ ಸಂಘದ ಅದ್ಯಕ್ಷರಾದ ಸೌಜನ್ಯ ಉಪಾಧ್ಯಾಯ ಮಾತನಾಡಿ ಬಸ್ಟ್ಯಾಂಡ್ ಗಣೇಶೋತ್ಸವ ಸಮಿತಿಯ ಕಾರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಎಲ್ಲರಿಗೂ ಆದರ್ಶವಾಗಿದೆ ಎಂದರು, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜ್ಯೋತಿಷ್ಯಿ ವಾದಿರಾಜ ಆಚಾರ್ಯ, ಗೌರವಾದ್ಯಕ್ಷರಾದ ಜಗದೀಶ್ ಮಲ್ಯ ಸಂದರ್ಭೋಚಿತ ಮಾತನಾಡಿದರು, ವೇದಿಕೆಯಲ್ಲಿ ಸಮಿತಿಯ ಅದ್ಯಕ್ಷರಾದ ಸುರೇಶ್ ದೇವಾಡಿಗ, ಉಪಾಧ್ಯಕ್ಷರಾದ ಶಿವಾಜಿ ರಾವ್, ರಾಜರಾಮ್ ಕಾಮತ್, ವಸಂತ ಪ್ರಭು ಉಪಸ್ಥಿತರಿದ್ದರು ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್ ಕಾರ್ಯಕ್ರಮವನ್ನು ನಿರ್ವಹಿಸಿದರು.


LEAVE A REPLY

Please enter your comment!
Please enter your name here