Home ತಾಜಾ ಸುದ್ದಿ ಆಂಟಿ ಎಂದು ಕರೆದಿದ್ದಕ್ಕೆ ಸೆಕ್ಯೂರಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ..! ದೂರು ದಾಖಲು

ಆಂಟಿ ಎಂದು ಕರೆದಿದ್ದಕ್ಕೆ ಸೆಕ್ಯೂರಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ..! ದೂರು ದಾಖಲು

0

ಬೆಂಗಳೂರು : ಆಂಟಿ ಎಂದು ಕರೆದಿದ್ದಕ್ಕೆ ಸೆಕ್ಯೂರಿ ಗಾರ್ಡ್​ಗೆ ಮಹಿಳೆ ಒಬ್ಬರು ಕಪಾಳಮೋಕ್ಷ ಮಾಡಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿತ್ತು. ಇದೀಗ ಕಪಾಳಮೋಕ್ಷ ಮಾಡಿದ ಮಹಿಳೆ ವಿರುದ್ಧ ದೂರು ದಾಖಲಾಗಿದೆ.

ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೃಷ್ಣಯ್ಯಗೆ ಕಪಾಳಕ್ಕೆ ಹೊಡೆದ ಮಹಿಳೆ ಅಶ್ವಿನಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕಳೆದ ಸೆಪ್ಟೆಂಬರ್ 19 ರಂದು ಎಟಿಎಂಗೆ ಹಣ ತುಂಬಲು ಸೆಕ್ಯೂರಿಟಿ ಗಾರ್ಡ್​ ಬಂದಿದ್ದರು. ಈ ವೇಳೆ ಅಡ್ಡ ನಿಂತಿದ್ದ ಮಹಿಳೆಗೆ ಆಂಟಿ ಸೈಡಿಗೆ ಬನ್ನಿ ಎಂದಿದ್ದರು. ಇದರಿಂದ ಕೋಪಿಸಿಕೊಂಡ ಮಹಿಳೆ ಕಪಾಳಕ್ಕೆ ಬಾರಿಸಿದ್ದಳು.

ಈ ಸಂಬಂಧ ಸೆಕ್ಯೂರಿಟಿ ಕೃಷ್ಣಯ್ಯ ಮಹಿಳೆ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 506, 504, 324, 355 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here