Home ತಾಜಾ ಸುದ್ದಿ ಅಪಾರ್ಟ್‍ಮೆಂಟ್ ಕಟ್ಟಡದ 9ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಅಪಾರ್ಟ್‍ಮೆಂಟ್ ಕಟ್ಟಡದ 9ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

0

ಬೆಂಗಳೂರು: ಇಲ್ಲಿನ ಬ್ಯಾಟರಾಯನಪುರದ ಅಪಾರ್ಟ್ ಮೆಂಟ್ ವೊಂದರ ಒಂಬತ್ತನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವುದು ವರದಿಯಾಗಿದೆ.


ವಿಜಯಲಕ್ಷ್ಮಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಎಂದು ತಿಳಿದು ಬಂದಿದೆ.�

ಮೃತ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಓದುತಿದ್ದು, ತಂದೆ-ತಾಯಿಗೆ ವಿಚ್ಛೇದನವಾದ ಬಳಿಕ, ತನ್ನ ತಾಯಿ ಯಶೋಧ ಎಂಬುವವರ ಜೊತೆ ಜ್ಞಾನಭಾರತಿಯ ಜ್ಞಾನಜ್ಯೋತಿನಗರದಲ್ಲಿ ವಾಸವಿದ್ದಳು. ಕಳೆದ ಒಂದು ವಾರದಿಂದ ವಿಜಯಲಕ್ಷ್ಮಿ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here