ಮಂಗಳೂರು: ತಂಗಿಯೊಂದಿಗೆ ಮಲಗಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಕಾಮುಕನೋರ್ವನ ಮೇಲೆ ಯುವತಿಯೋರ್ವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ನವೆಂಬರ್ 20ರಂದು ರಾತ್ರಿ ಊಟ ಮುಗಿಸಿ, ತಮ್ಮ ಮನೆಯ ಕೋಣೆಯಲ್ಲಿ ತಂಗಿಯರೊಂದಿಗೆ ಮಲಗಿದ್ದರು. ಈ ವೇಳೆ ವಿಶ್ವನಾಥ ಎಂಬವನು ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕಿಟಕಿಯಿಂದ ಇಣುಕಿ ನೋಡಿದ್ದಾನೆ ಎಂದು ಸಂತ್ರಸ್ತ ಯುವತಿ ನೀಡಿದ್ದಾರೆ. ಆಕೆ ನೀಡಿರುವ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354(c) ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.