Home ಕರಾವಳಿ ಮಂಗಳೂರು: ಕರಾವಳಿಯಾದ್ಯಂತ ಸಂಭ್ರಮದ ಚೌತಿ ಹಬ್ಬ ಆಚರಣೆ

ಮಂಗಳೂರು: ಕರಾವಳಿಯಾದ್ಯಂತ ಸಂಭ್ರಮದ ಚೌತಿ ಹಬ್ಬ ಆಚರಣೆ

0

ಮಂಗಳೂರು: ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಪ್ರತಿ ವರ್ಷ ಭಾರತದಾದ್ಯಂತ ವೈಭವದಿಂದ ಚೌತಿ ಹಬ್ಬ ಆಚರಿಸುತ್ತಾರೆ. ಅದರಂತೆ ಇಂದು ಕರಾವಳಿಯಾದ್ಯಂತ ಸಂಭ್ರಮದಿಂದ ಚೌತಿ ಹಬ್ಬ ಆಚರಣೆ ಮಾಡಲಾಗುತ್ತಿದೆ.


ಚೌತಿ ಹಬ್ಬದಂದು ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಸೇರಿದಂತೆ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.ಮೊದಲಿಗೆ ಮರಾಠರ ಶ್ರೇಷ್ಠ ರಾಜ ಛತ್ರಪತಿ ಶಿವಾಜಿಯು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲು ಆರಂಭಿಸಿದನೆಂದು ಇತಿಹಾಸ ಹೇಳುತ್ತದೆ. ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ದಂತ ಕತೆಗಳ ಹಿನ್ನಲೆಯಿದೆ.ಒಂದಾನೊಂದು ಕಾಲದಲ್ಲಿ ಎಲ್ಲ ದೇವರನ್ನು ಮೊದಲು ಪೂಜಿಸಬೇಕು ಎಂಬ ವಾದವಿತ್ತು. ಎಲ್ಲಾ ದೇವರುಗಳು ತಮ್ಮನ್ನು ತಾವು ಶ್ರೇಷ್ಠರೆಂದು ಘೋಷಿಸಲು ಪ್ರಾರಂಭಿಸಿದರು. ತಮ್ಮ ತಮ್ಮಲ್ಲೇ ಜಗಳವಾಡತೊಡಗಿದರು. ಆದ್ದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಿವನನ್ನು ಸಂಪರ್ಕಿಸಲು ನಾರದರು ಸಲಹೆ ನೀಡಿದರು. ದೇವತೆಗಳೆಲ್ಲ ಶಿವನ ಮೊರೆ ಹೋದಾಗ.. ಶಿವನು ಈ ವಿವಾದವನ್ನು ಬಗೆಹರಿಸುವ ಉಪಾಯವನ್ನು ಯೋಚಿಸಿದನು. ಯಾರು ಇಡೀ ಬ್ರಹ್ಮಾಂಡವನ್ನು ಸಂಚರಿಸಿ ತನ್ನನ್ನು ಮೊದಲು ತಲುಪುತ್ತಾರೋ ಅವರು ಇತರೆ ದೇವತೆಗಳಿಂದ ಜಗತ್ತಿನಲ್ಲಿ ಮೊದಲ ಪೂಜೆಯನ್ನು ಸ್ವೀಕರಿಸುತ್ತಾರೆ ಎಂದು ಎಲ್ಲಾ ದೇವರುಗಳಿಗೆ ಹೇಳಿದ್ದಾರೆ.ಇನ್ನು ಶಿವನ ಮಾತುಗಳನ್ನು ಕೇಳಿ ದೇವತೆಗಳೆಲ್ಲರೂ ತಮ್ಮ ತಮ್ಮ ವಾಹನಗಳ ಮೇಲೆ ಕುಳಿತು ವಿಶ್ವದಲ್ಲಿ ಸಂಚರಿಸಲು ಹೊರಟರು. ಈ ಓಟದಲ್ಲಿ ಗಣೇಶನೂ ಭಾಗವಹಿಸಿದ್ದ. ಆದರೆ ಬ್ರಹ್ಮಾಂಡವನ್ನು ಸುತ್ತುವ ಬದಲು, ಗಣೇಶನು ತನ್ನ ಹೆತ್ತವರನ್ನು ಅಂದರೆ ಶಿವನನ್ನು 7 ಬಾರಿ ಸುತ್ತಿದನು. ಅದರ ನಂತರ ಅವನು ತನ್ನ ಹೆತ್ತವರ ಮುಂದೆ ಕೈಗಳನ್ನು ಜೋಡಿಸಿ ನಿಂತನು. ಎಲ್ಲಾ ದೇವರುಗಳು ಬ್ರಹ್ಮಾಂಡದ ಸುತ್ತಲೂ ಪ್ರದಕ್ಷಿಣೆ ಹಾಕಿ ಶಿವನನ್ನು ತಲುಪಿದಾಗ, ಆಗಲೇ ಶಿವನ ಬಗ್ಗೆ ಯೋಚಿಸುತ್ತಿದ್ದ ಗಣೇಶನು ಕಾಣಿಸಿಕೊಂಡನು. ನಂತರ ಶಿವನು ಗಣಪತಿ ಗೆದ್ದಿರುವುದಾಗಿ ಘೋಷಿಸುತ್ತಾರೆ. ಹೀಗೆ ಗಣಪತಿ ಆದಿ ಪೂಜಿತನಾದ.

LEAVE A REPLY

Please enter your comment!
Please enter your name here