Home ಕರಾವಳಿ ಚೈತ್ರಾ ಕುಂದಾಪುರ ಕಾರು ಪತ್ತೆ ಹಚ್ಚಿದ CCB ಪೊಲೀಸರು

ಚೈತ್ರಾ ಕುಂದಾಪುರ ಕಾರು ಪತ್ತೆ ಹಚ್ಚಿದ CCB ಪೊಲೀಸರು

0

ಬಾಗಲಕೋಟೆ: ಇಲ್ಲಿನ ಮುಧೋಳದಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದಂತ ಕಾರನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಚೈತ್ರಾ ಕುಂದಾಪುರ ಅವರ ಕಾರನ್ನು ಜಪ್ತಿ ಮಾಡಿದ್ದಾರೆ.


ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಕಿರಣ್ ಎಂಬುವರಿಗೆ ಸೇರಿದ್ದಂತ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಕಾರು ನಿಲ್ಲಿಸಿದ್ದರು.

ಸೆಪ್ಟೆಂಬರ್.9ರಂದು ಮುಧೋಳಕ್ಕೆ ಕಾರ್ಯಕ್ರಮಕ್ಕೆ ಬಂದಂತ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತ ಕಿರಣ್ ಅವರ ಮನೆಯಲ್ಲಿ ಚೈತ್ರ ಕುಂದಾಪುರ ತಮ್ಮ ಕೆಎ-20 ಎಂಇ-7253 ನಂಬರ್ ಕಾರನ್ನು ಅಲ್ಲಿಯೇ ನಿಲ್ಲಿಸಿದ್ದರು.

ಮುಧೋಳದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದಂತ ಕಿರಣ್ ಮನೆಯಲ್ಲಿ ನಿಲ್ಲಿಸಲಾಗಿದ್ದಂತ ಚೈತ್ರಾ ಕುಂದಾಪುರ ಕಾರನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಮೂಲಕ ಹಣ, ಒಡವೆ, ಆಸ್ತಿ ಪತ್ರ ಜಪ್ತಿಯ ಬಳಿಕ, ಈಗ ಕಾರನ್ನು ಸೀಜ್ ಮಾಡಿದ್ದಾರೆ. ಈ ಮೂಲಕ ಚೈತ್ರಾ ಕುಂದಾಪುರಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.

LEAVE A REPLY

Please enter your comment!
Please enter your name here